ಚಳ್ಳಕೆರೆ : ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಜೂಜು ಕೋರರನ್ನು ಇಡಿಯುವಲ್ಲಿ ಡಿ ವೈ ಎಸ್ಪಿ ಬಿಟಿ.ರಾಜಣ್ಣ ನೇತೃತ್ವದ ತಂಡ ಯಶಸ್ವಿಯಾಗಿದೆ
ಹೌದು ಕಳೆದ ಹಲವು ದಿನಗಳಿಂದ ಜೂಜುಕೋರರ ಮೇಲೆ ಹದ್ದಿನ ಕಣ್ಊ ಇಟ್ಟ ಖಾಕಿ ಪಡೆ ಇಂದು ಸುಮಾರು ಐವತ್ತು ಸಾವಿರ ನಗದು ಹಾಗೂ 14 ದ್ವಿಚಕ್ರ ವಾಹನಗಳು ಸೆರಿದಂತೆ ಸುಮಾರು
ಹತ್ತು ಜನ ಜೂಜುಕೋರರನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನಲ್ಲಿ ಮಟ್ಕಾ, ಗಾಂಜಾ ಹಾಗೂ ಇನ್ನಿತರೆ ಮಾದಕ ವಸ್ತುಗಳ ನುಸಳದಂತೆ ಎಚ್ಚರ ವಹಿಸಿದ ಖಾಕಿ ಪಡೆ ಇಸ್ಪೀಟು ಜೂಜುಕೊರರನ್ನು ಎಢಮುರೆ ಕಟ್ಟುವಲ್ಲಿ ಸದಾ ಮುಂದಿದೆ.
ಡಿವೈಎಸ್ ಪಿ ಬಿಟಿ.ರಾಜಣ್ಣ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿ ಪಡೆ ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಆರ್ ಎಪ್.
ದೇಸಾಯಿ, ಹಾಗೂ ಪಿಎಸ್ಐ ಧರೇಪ್ಪ ಹಾಗೂ ಸಿಬ್ಬಂದಿ
ಚಳ್ಳಕೆರೆ ತಾಲೂಕಿನ ವೀರದಿಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಸು.14 ಬೈಕ್, 50 ಸಾವಿರ ರೂ ಹಾಗೂ 10 ಇಸ್ಪೀಟ್ ಜೂಜುಕೋರರನ್ನು ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ತಾಲೂಕಿನ ಜನತೆ ಪೊಲೀಸರ ಈ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.