ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬೆಳೆಯಾಗಲಿ ಜನ -ಜಾನುವಾರುಗಳಿಗೆ ರೋಗರುಜಿನೆ ಭಾರದಿರಲಿ ಹೋಲಿಗಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ.
ನಾಯಕನಹಟ್ಟಿ:: ಜುಲೈ 23. ಹೋಳಿಗಮ್ಮ ದೇವಿಗೆ ಮತ್ತೊಂದು ಹೆಸರು ಅಜ್ಜಿ ಹಬ್ಬ ಎಂದು ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ ಹೇಳಿದ್ದಾರೆ.
ಮಂಗಳವಾರ ಪಟ್ಟಣದ ಒಳ ಮಠದ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಹೋಳಿಗಮ್ಮ ದೇವಿಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿ ವರ್ಷ ಹೋಳಿಗೆಮ್ಮ ಮತ್ತು ಅಜ್ಜಿ ಹಬ್ಬ ಎಂದು ಆಚರಣೆ ಮಾಡುತ್ತಾರೆ ಗ್ರಾಮದಲ್ಲಿ ಮಕ್ಕಳಿಗೆ ಜನ ಜಾನುವಾರುಗಳಿಗೆ ರೋಗ ರುಜನೆ ಬಾರದಿರಲಿ ಶ್ರೀ ಹೋಳಿಗಮ್ಮ ದೇವಿಯನ್ನು ಊರಿನ ಹೊರಭಾಗದ ಹಾಲದ ಮರದ ಹತ್ತಿರ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಹೋಳಿಗಮ್ಮ ದೇವಿಯನ್ನು ಬಿಟ್ಟು ಬರೋದು ವಾಡಿಕೆ ಎಂದರು.
ಇದೇ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್ ಮಾತನಾಡಿದರು ಗ್ರಾಮಸ್ಥರು ಹೋಳಿಗಮ್ಮ ದೇವಿ ಕಾರ್ಯವನ್ನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಸಂಪ್ರದಾಯದಂತೆ ಆಚರಣೆ ಮಾಡುತ್ತಾರೆ ಈ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದು ಹೋಳಿಗಮ್ಮ ಹಬ್ಬವನ್ನು ಮಾಡುತ್ತಾರೆ ಎಂದರು..
ಇನ್ನೂ ಗ್ರಾಮಸ್ಥ ನಾಗರಾಜ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ., ಎಸ್. ಸತೀಶ್ ,ಮಹಾಂತೇಶ್, ಮಲ್ಲಿಕಾರ್ಜುನ್, ಶಶಿ, ತಿಪ್ಪೇಸ್ವಾಮಿ ,ನಾಗರಾಜ್, ಪ್ರಕಾಶ್ ,ಅಶೋಕ್, ಗಿರಿ, ಇನ್ನೂ ಗ್ರಾಮಸ್ಥರು ಇದ್ದರು