ಚಳ್ಳಕೆರೆ :
“ದೇವರ ಎತ್ತುಗಳಿಗೆ ಮೇವು ವಿತರಣಾ ಕಾರ್ಯ ಶ್ಲಾಘನೀಯವಾದದ್ದು”:-
ಚಳ್ಳಕೆರೆ ಶ್ರೀ ಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯ ಪಟ್ಟರು
ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ದೇವರಹಟ್ಟಿ ಗ್ರಾಮದ ದೇವರ ಎತ್ತುಗಳಿಗೆ ಭತ್ತದ ಹುಲ್ಲನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ದೇವರ ಎತ್ತುಗಳಿಗೆ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಸದ್ಭಕ್ತರಾದ ಶ್ರೀ ಮತಿ ಸುಮನ ಕೋಟೇಶ್ವರ ಮತ್ತು ಶ್ರೀ ಸಂತೋಷಕುಮಾರ್ ಅಗಸ್ತ್ಯ ಅವರು ಮೇವನ್ನು ನೀಡುತ್ತಿರುವುದು ಬಹಳ ಪವಿತ್ರವಾದ ಸೇವೆ,
ಅವರ ಈ ಸೇವೆ ಆಶ್ರಮದ ಭಕ್ತರಿಗೆ ಮತ್ತು ನಾಗರಿಕರಿಗೆ ಮಾದರಿಯಾದದ್ದು ಇಂತಹ ಮೇವು ವಿತರಣಾ ಸೇವೆಗೆ ಎಲ್ಲರೂ ಕೈಜೋಡಿಸಬೇಕೆಂದರು,
ಶ್ರೀ ಶಾರದಾಶ್ರಮದ ಸದ್ಭಕ್ತರಾದ ಯತೀಶ್ ಎಂ.ಸಿದ್ದಾಪುರ ಮಾತನಾಡಿ “ಇಂತಹ ಹಲವು ಸಮಾಜಮುಖಿ ಕೆಲಸಗಳು ಚಳ್ಳಕೆರೆಯ ಶ್ರೀ ಶಾರದಾಶ್ರಮದ ವತಿಯಿಂದ ನಡೆಯುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆ” ಎಂದರು.
ಈ ಮೇವು ವಿತರಣಾ ಕಾರ್ಯಕ್ರಮದಲ್ಲಿ ನಗರಸಭಾ ನಾಮನಿರ್ದೇಶಿತ ಸದಸ್ಯರಾದ ನೇತಾಜಿ ಪ್ರಸನ್ನ, ಕಿಲಾರಿ ಎತ್ತಿನ ಕಾಟಯ್ಯ, ಚೆನ್ನಕೇಶವ, ಯತೀಶ್ ಎಂ.ಸಿದ್ದಾಪುರ, ಹೊಟ್ಟಪ್ಪನಹಳ್ಳಿ ರವಿ,ಚೆನ್ನಬಸವ, ಅಂಬುಜಮ್ಮ, ಸಂತೋಷ್, ಡಾ.ಭೂಮಿಕ,ಚೇತನ್, ಪುಷ್ಪ, ಸುಕೃತಿ, ಇತರರು ಉಪಸ್ಥಿತರಿದ್ದರು.