ಚಳ್ಳಕೆರೆ :
ಗುರುವಾದವರು ಮೈಯೆಲ್ಲಾ ಕಣ್ಣಾಗಿರಬೇಕು:
ಸಾಣೇಹಳ್ಳಿ ಶ್ರೀಗಳು
ಸ್ವಾಮಿಗಳಾದವರು ಮಾರ್ಗದರ್ಶನ ಮಾಡಬೇಕೇ ಹೊರತು
ರಾಜಕೀಯ ಮಾಡಬಾರದು.
ಮಠಾಧೀಶರಿಗೆ ಮಾಡಬೇಕಾದ
ಕೆಲಸಗಳು ಬೇಕಾದಷ್ಟಿವೆ.
ಅವುಗಳನ್ನು ಮಾಡುವುದು ಬಿಟ್ಟು
ಅನ್ಯ ಕೆಲಸಗಳಿಗೆ ಕೈಹಾಕಿದರೆ ತಪ್ಪು ದಾರಿ ತುಳಿಯಲಿಕ್ಕೆ
ದಾರಿಯಾಗುತ್ತದೆ. ಆದ್ದರಿಂದ ಗುರುವಾದವರು ಮೈಯೆಲ್ಲಾ
ಕಣ್ಣಾಗಿರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ
ಶಿವಶಂಕರಪ್ಪ ರಂಗಮಂದಿರದಲ್ಲಿ ಆಯೋಜಿಸಿದ್ದ ‘ವಚನ ಕಮ್ಮಟ’
ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.