ಉಂಡು ಮಲಗುವ ಮುನ್ನವೇ ಕಳ್ಳರು ಎಂಟ್ರಿ ಒಡವೆ ಹಣ ಸೇರಿದಂತೆ ಸುಮಾರು 5 ಲಕ್ಷ ದೋಚಿ ಪರಾರಿ.
ಹೌದು
ಚಳ್ಳಕೆರೆ ನಗರದ ಹೊರವಲಯದ ಬೆಂಗಳೂರು ರಸ್ತೆಯ ನಿರ್ಮಲ ಲಾಡ್ಜ್ ಹಿಂಭಾಗ ಹಿರೆಮಧುರೆ ಸ, ಕಿ.ಪ್ರಾಥಮಿಕಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ಶಿಕ್ಷಕ ಈರಣ್ಣ ಇವರ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವಾಗ ಶನಿವಾರ ರಾತ್ರಿ.11.30 ಕ್ಕೆ ಸರಿಯಾಗಿ ಮೂರು ಜನ ಕಳ್ಳರು ನುಗ್ಗಿ ಗಂಡ ಹೆಂಡತಿ ಮೇಲೆ ಚಾಕು ಹಾಗೂ ಚೂಪಾದ ಕೋಲಿನಿಂದ ಹಲ್ಲೆ ಮಾಡಿ ಮಾಂಗಲ್ಯ ಚೈನ್.ಉಂಗುರ .ಓಲೆ ಇತರೆ ಒಡವೆ ಹಣ ಸೇರಿದಂತೆ ಸುಮಾರು 5 ರೂ ದೋಚಿ ಪರಾರಿಯಾಗಿದ್ದು ,ಶಿಕ್ಷಕ ಈರಣ್ಣ ಹಾಗು ಪತ್ನಿ ನಗರದ ಸಾರ್ವಜನಿಕಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಪ್ರಕರಣದಿಂದ ನಗರ ಹಾಗೂ ಸುತ್ತಮುತ್ತಲ ನಾಗರೀಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ದು ನಗರದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರಗಳಿಲ್ಲದೆ ಇರುವುದು ಕಳ್ಳತನ ದರೋಡೆಕೋರರಿಗೆ ವರದಾನವಾಗಿದ್ದು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸಿಸಿ ಕ್ಯಾಮರ ಅಳವಡಿಸಲು ಮುಂದಾಗುವರೇ ಕಾದು ನೋಡಬೇಕಾಗಿದೆ...