ಮಡಿಲು ಸಂಸ್ಥೆಯಿಂದ ಯೋಗ ದಿನಾಚರಣೆ
ಯೋಗದಿಂದ ಉತ್ತಮ ಆರೋಗ್ಯ ಲಭಿಸುತ್ತದೆ: ಮುಖ್ಯ ಶಿಕ್ಷಕ ಫಯಾಸ್
ಚಿತ್ರದುರ್ಗ:
ಯೋಗ ಮಾಡುವುದರಿಂದ ರೋಗ ಬರುವುದಿಲ್ಲ ದೇಹವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಆ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಗೌಸ್ ಫಯಾಜ್ ತಿಳಿಸಿದರು.
ನಗರದ ಐಯುಡಿಪಿ ಲೇಔಟ್ ನಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನೆಹರು ಯುವ ಕೇಂದ್ರ ಚಿತ್ರದುರ್ಗ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಆರೋಗ್ಯವೇ ಭಾಗ್ಯ ಎನ್ನುವ ನಾಡು ನುಡಿಯಂತೆ ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಯೋಗ ನಮ್ಮ ಜೀವನಕ್ಕೆ ಅತ್ಯಮೂಲ್ಯ ಆಯಸ್ಸು ಹೆಚ್ಚಾಗಬೇಕಾದರೆ ಪ್ರತಿದಿನ ಯೋಗ ಮಾಡುವುದರ ಮೂಲಕ ನಮ್ಮ ಆರೋಗ್ಯವನ್ನು ನಾವು ಸದೃಢವಾಗಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ನೂರಾರು ವರ್ಷಗಳ ಹಿಂದೆ ಅನೇಕ ಋಷಿಮುನಿಗಳು ನೂರು ವರ್ಷಗಳ ಕಾಲ ಬದುಕ್ತಿದ್ರು, ಕಾರಣ ಅವರ ಆರೋಗ್ಯದ ಸಮತೋಲನ ಅತ್ಯಂತ ಮುಖ್ಯವಾಗಿರುತ್ತಿತ್ತು. ಹಾಗಾಗಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕಾದರೆ ಸದೃಢವಾದ ದೇಹವನ್ನು ಕೂಡ ಕಾಪಾಡಿಕೊಳ್ಳಬೇಕು ಉತ್ತಮವಾದ ಊಟ ಸೇವನೆ ಮಾಡಬೇಕು, ಜೊತೆಗೆ ದಿನನಿತ್ಯದ ವ್ಯಾಯಾಮ ಯೋಗವನ್ನು ಮಾಡಿದರೆ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಒಂದು ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕರಾದ ಸಲ್ಮಾ,ಅನುಸೂಯಮ್ಮ,ಪ್ರಸಾದ್, ಅಕ್ಕಮಹಾದೇವಿ,ಅನಿತಾ ಕುಮಾರಿ,ರಾಧಾ ಹಾಗೂ ಸಂಸ್ಥೆಯ ಕಾರ್ಯದರ್ಶಿಯಾಗಿ ಆನಂದಪ್ಪ, ಮಹಾಂತೇಶ್, ಪ್ರವೀಣ್ ಕುಮಾರ್, ದರ್ಶನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.