ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ನಡೆದ ಸೊಂಡೆಕೆರೆ ಶಿವಣ್ಣ ರವರ ನೇತೃತ್ವದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು
ಪಾಲ್ಗೊಂಡು ಮಾತನಾಡಿದರು.
ವಾಲ್ಮೀಕಿ ಧ್ವನಿ ಪತ್ರಿಕೆಯ ವತಿಯಿಂದ ನಗರದ ಶಾಸಕರ ಭವನದಲ್ಲಿ ನಡೆದ 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಧ್ವನಿ ಪತ್ರಿಕೆಯ ಸಂಪಾದಕರಾದ ಸೋಂಡೇಕೆರೆ ಶಿವಣ್ಣ, ಹಿರಿಯ ಮುಖಂಡರಾದ ಟಿ.ಎ.ಟಿ.ಪ್ರಭುದೇವ್, ಸೀರಿಯಪ್ಪ, ಪಿ.ತಿಪ್ಪೇಸ್ವಾಮಿ, ಭೂತಪ್ಪ, ಮೂಡಲಾಗಿರಿಯಪ್ಪ, ಮುಖಂಡರುಗಳಾದ ಸಿ.ಟಿ.ಶ್ರೀನಿವಾಸ್, ಕೃಷ್ಣಮೂರ್ತಿ, ಪ್ರಹ್ಲಾದ್, ದೊರೆ ಅಪ್ಪಣ್ಣ, ರಾಜಣ್ಣ, ರುದ್ರೇಶ್, ನಾಗರಾಜ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.