ಚಳ್ಳಕೆರೆ ನ್ಯೂಸ್ :
ಚಿತ್ರ ನಟ ದರ್ಶನ್ ರನ್ನು ಬ್ರಹ್ಮ ಕುಡ ಕ್ಷಮಿಸಲಾರ
ಅಮಾನವೀಯ ಕೃತ್ಯ ಮಾಡಿರುವ ಚಿತ್ರ ನಟ ದರ್ಶನ್ ಅವರನ್ನು
ಆ ಬ್ರಹ್ಮ ಕೂಡ ಕ್ಷಮಿಸಲಾರ ಎಂದು ವೀರಶೈವ ಸಮುದಾಯದ
ಮುಖಂಡ ಮರುಳಾರಾಧ್ಯ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ರೇಣುಕಾಸ್ವಾಮಿ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ
ಭಾಗವಹಿಸಿ ಮಾತಾಡಿದರು.
ರೇಣುಕಾಸ್ವಾಮಿ ಕೊಲೆಗೆ
ನ್ಯಾಯಬೇಕಿದೆ. ಕೊಲೆಯಲ್ಲಿ ಭಾಗಿಯಾದವರನ್ನು ಹೊರಗೆಳೆದು
ಅವರಿಗೆ ಶಿಕ್ಷೆ ಕೊಡಿಸಬೇಕಿದೆ ಎಂದರು.