ಚಳ್ಳಕೆರೆ ನ್ಯೂಸ್ :

ಹೊಳಲ್ಕೆರೆ ಕ್ಷೇತ್ರದ ಹಳಿಯೂರಿನಿಂದ ಕುರುಬರಹಳ್ಳಿ ಶಾಲೆಗೆ
ಪ್ರತಿನಿತ್ಯ ಮಕ್ಕಳು ಓಡಾಡುತ್ತಾರೆ.

ಓಡಾಡುವಾಗ ಅಂಡರ್ ಪಾಸ್
ದಾಟಿಕೊಂಡು ಹೋಗಬೇಕು. ಈ ಅಂಡರ್ ಪಾಸ್, ಮಳೆಗಾಲ
ಬಂತೆಂದರೆ ತುಂಬಿ ಹರಿಯುತ್ತದೆ.

ಮಳೆ ಬಂದು ಮಕ್ಕಳು ಶಾಲೆಗೆ
ಹೋಗಿ ಬರುವುದೇ ಹರ ಸಾಹಸವಾಗಿದೆ. ಸರ್ಕಾರಿ ಶಾಲೆಗೆ ಶೇಕಡ
90% ರಷ್ಟು ಪೋಷಕರು, ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ
ಕಳುಹಿಸುವುದೇ ಬೇಡ ಎನ್ನುತ್ತಿದ್ದಾರೆ.

ರೈಲ್ವೆ ಇಲಾಖೆ ಗಮನಕ್ಕೆ
ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ
ಮುಖಂಡರು ಹೇಳುತ್ತಾರೆ.

About The Author

Namma Challakere Local News
error: Content is protected !!