ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಿಹಿ ಹಂಚಿ ಜಯ ಘೋಷಣೆ ಕೂಗಿ ಸಂಭ್ರಮಿಸಿದರು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ.

ನಾಯಕನಹಟ್ಟಿ:: ಕೋಟೆ ನಾಡಿನಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಗೋವಿಂದ ಎಂ. ಕಾರಜೋಳ ಅವರು ಜಯ ಗಳಿಸಿರುವುದು ತುಂಬಾ ಸಂತಸ ತಂದಿದೆ ಎಂದು ಮಾಜಿ ಶಾಸಕ ನೇರಲಗುಂಟೆ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.

ಪಟ್ಟಣದಲ್ಲಿ ಮಂಗಳವಾರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಬಿಜೆಪಿ ಮುಖಂಡರು ಪಟ್ಟಣದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ ವೇಳೆ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು ಒಬ್ಬ ಮಂತ್ರಿ ಇದ್ರು ಸಹ ತೀವ್ರ ಹಣಾಹಣೆ ಏರ್ಪಟ್ಟಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ ಬಿಜೆಪಿ ಅಭ್ಯರ್ಥಿ ಎಂ. ಗೋವಿಂದ ಕಾರಜೋಳ ಅತಿ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಸಂಪರ್ಕ ಸಾಧಿಸಿ ಫಲವಾಗಿ ಕ್ಷೇತ್ರದ ಪ್ರತಿಯೊಬ್ಬ ಮತದಾರರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದ ಸರಳ ಸಜ್ಜನಿಕೆಯ ವ್ಯಕ್ತಿ ಘಟಾನುಘಟಿ ನಾಯಕರನ್ನು ಮೆಟ್ಟಿನಿಂತು ಗೋವಿಂದ ಎಂ ಕಾರಜೋಳ 47065 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಗೋವಿಂದ ಎಂ. ಕಾರಜೋಳ ಚಿತ್ರದುರ್ಗ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಭರವಸೆ ಇದೆ ಎಂದರು.
.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ ಮಂಜುನಾಥ್, ಬಿ ಟಿ ತಿಪ್ಪೇಸ್ವಾಮಿ, ಜೆಡಿಎಸ್ ಮೊಳಕಾಲ್ಮುರು ತಾಲೂಕು ಅಧ್ಯಕ್ಷ ಡಿ ಬಿ ಕರಿಬಸಪ್ಪ, ದಳವಾಯಿ ,ಕನ್ನಯ್ಯ, ಬಿಸಿ ಶಿವಾನಂದ ಸ್ವಾಮಿ ಗೌರಿಪುರ. ಯುವ ಮುಖಂಡ ತಾರಕೇಶ್, ಗ್ರಾ.ಪಂ. ಮಾಜಿ ಸದಸ್ಯ ಬಲ್ಲನಾಯಕನಹಟ್ಟಿ ಬಿ. ತಿಪ್ಪೇಸ್ವಾಮಿ ಜೆಡಿಎಸ್ ಮುಖಂಡ ಮಲ್ಲೂರಹಳ್ಳಿ ತಿಪ್ಪಯ್ಯ, ದ್ರಾಳಿಂಬ್ರೆ ಮಂಜು, ಜಾನೂರಹಟ್ಟಿ ಬಿ.ಟಿ.ಪ್ರಕಾಶ್, ಟಿ ಶಿವಲಿಂಗಪ್ಪ, ಶ್ರೀನಿವಾಸ್, ಮಲ್ಲಿಕಾರ್ಜುನ್, ರಾಮಸಾಗರ ಸಿ ಎಂ ಪಾಲಯ್ಯ, ಬಡಗಿ ತಿಪ್ಪೇಸ್ವಾಮಿ, ಮಾದಯ್ಯನಹಟ್ಟಿ ನಾಗರಾಜ್, ಮಲ್ಲೂರಹಳ್ಳಿ ಗುಂಡಯ್ಯ, ಗುಂತಕೋಲಮ್ಮನಹಳ್ಳಿ ಬೂಟ್ ತಿಪ್ಪೇಸ್ವಾಮಿ, ಬೇಬಿ ತಿಪ್ಪೇಸ್ವಾಮಿ, ಇದ್ದರು.

Namma Challakere Local News
error: Content is protected !!