ಚಳ್ಳಕೆರೆ ನ್ಯೂಸ್ : ಸುಮಾರು ವರ್ಷಗಳ ಮಕ್ಕಳಿಗೆ ಪಾಠಹೇಳಿ ಕೊಡುವ ಕೈಗಳು ಇಂದು ನಿವೃತ್ತಿ ಬಯಸುತ್ತಿವೆ ಆದರೆ ಸರಕಾರಿ ಸೇವೆಯಲ್ಲಿ ಇದ್ದಷ್ಟು ದಿನಗಳ ಕಾಲ ಉತ್ತಮ ಸೇವೆ ಮಾಡಿದ್ದೆನೆ ಎಂಬ ಆತ್ಮ ತೃಪ್ತಿ ನನಗಿದೆ ಎಂದು ನಿವೃತ್ತ ಹೊಂದಿದ ಸಹ ಶಿಕ್ಷಕಿ ವೃಷಭೇಂದ್ರ ಮಣಿ ಹೇಳಿದರು.
ಚಳ್ಳಕೆರೆ ತಾಲೂಕಿನ ನನ್ನಿವಾಳ ಕ್ಲಸ್ಟರ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರತ್ನಗಿರಿಹಟ್ಟಿ ಆಯೋಜಿಸಿದ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಉತ್ತಮವಾಗಿ ಕಲಿಸಿದ ಆತ್ಮ ತೃಪ್ತಿ ಇದೆ ಸರಕಾರಿ ಸೇವೆ ಎಂಬುದು ಒಂದು ಪುಣ್ಯದ ಕಾರ್ಯ ಇದರಲ್ಲಿ ಇದ್ದಷ್ಟು ದಿನಗಳ ಕಾಲ ಅದರಲ್ಲಿ ಶಿಕ್ಷಕರಾಗಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಮಾರಂಭದಲ್ಲಿ SDMC ಅಧ್ಯಕ್ಷರಾದ ಬೋರಯ್ಯ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ ಎಸ್ ಸುರೇಶ್, ಅಕ್ಷರ ದಸೋಹ ಅಧಿಕಾರಿ ಬಿ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ಪ್ರಭಾರ ಕ್ಷೇತ್ರ ಸಮನ್ನುಯಾಧಿಕಾರಿಗಳು,
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ್ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಟಿ ತಿಪ್ಪೇಸ್ವಾಮಿ, ಎಚ್ ಹನುಮಂತಪ್ಪ ನಿಕಟ ಪೂರ್ವ ಕಾರ್ಯದರ್ಶಿ ಮತ್ತು ಹಾಲಿ ನಿರ್ದೇಶಕರು, ಮಂಜುನಾಥ ರೆಡ್ಡಿ CRP ನನ್ನಿವಾಳ ಹಾಗೂ ರಾಮಜೋಗಿಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಆರ್ ತಿಪ್ಪೇಶಪ್ಪ ಮಾಜಿ ಸಿಆರ್ಪಿ ಶಿಕ್ಷಕರು ಹಾಜರಿದ್ದರು ಹಿರಿಯ ಶಿಕ್ಷಕರಾದ ಶ್ರೀಕಾಂತರಾಜು N, ರುದ್ರಣ್ಣ, ಆರ್ ಹನುಮಂತಪ್ಪ , ವೀಣಾ, ಕರಿ ಬಸಮ್ಮ , ಕ್ಲಸ್ಟರ್ನ ಎಲ್ಲಾ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಸದಸ್ಯರು,ಗ್ರಾಮಸ್ಥರು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.