ಚಳ್ಳಕೆರೆ ನ್ಯೂಸ್ : ಅಡಿಕೆ ಬೆಳೆ ಉಳಿಸಲು ಪರದಾಡುತ್ತಿರುವ ರೈತ
ಹಿರಿಯೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಮಾರು ಹೋದ ರೈತರ
ಪಾಡು ಚಿಂತಾಜನಕವಾಗಿದೆ.
ಕಳೆದೆರಡು ವರ್ಷಗಳ ಹಿಂದೆ ಉತ್ತಮ
ಮಳೆಯಾಗಿದ್ದು, ವಿವಿಸಾಗರ ಮತ್ತು ಗಾಯಿತ್ರಿ ಜಲಾಶಯಗಳು
ತುಂಬಿ ಹರಿದಿದ್ದವು.
ಇದರಿಂದ ಅಡಿಕೆ ಬೆಳೆಯತ್ತ ಮುಖ ಮಾಡಿದ್ದ ರೈತರು
ಕೊಳವೆ ಬಾವಿ ಕೊರೆಸಿದ್ದು, ಬರಗಾಲ ಎದುರಾಗಿದ್ದರಿಂದ, ಕೊಳವೆ
ಬಾವಿಯಲ್ಲಿ ನೀರಿಲ್ಲದಾಗಿದೆ.
ಆದರೆ ಅಲ್ಲಲ್ಲಿ ಸಿಕ್ಕಷ್ಟು ನೀರನ್ನು
ಟ್ಯಾಂಕರ್ ನಲ್ಲಿ ತಂದು ಗಿಡಿಗಳನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂದು
ರೈತ ಮಹಿಳೆ ಶಾಂತಕುಮಾರಿ ಹೇಳುತ್ತಾರೆ.
ಇನ್ನೂ ಮುಂಗಾರು ಮಳೆ ಬರುವವರಿಗೂ ಈ ಅಡಕೆ ಗಿಡಗಳಿಗೆ ಆ ದೇವರೆ ದಿಕ್ಕು ಎಂಬಂತಾಗಿದೆ