ಚಳ್ಳಕೆರೆ ನ್ಯೂಸ್ :
ಬಡವರು ಹೊಟ್ಟೆ ತುಂಬಾ ಊಟ ಮಾಡುವುದನ್ನು
ಬಿಜೆಪಿ ಸಹಿಸಲ್ಲ
ಬಿಜೆಪಿಯವರ ತರ ಸುಳ್ಳು ಹೇಳಲ್ಲ. ಹೊಟ್ಟೆ ತುಂಬ ಊಟ
ಮಾಡುವುದನ್ನು, ಬಿಜೆಪಿಯವರು ಸಹಿಸುವುದಿಲ್ಲವೆಂದು ಚಿತ್ರದುರ್ಗ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ
ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು
ನಾವು ಜನರಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಿದ್ದೇವೆ.
ಬಿಜೆಪಿಯವರು ಮಾತ್ರ ಹೊಟ್ಟೆ ತುಂಬಾ ಊಟ ಮಾಡಬೇಕು,
ಕಟ್ಟಕಡೆಯ ಮನುಷ್ಯ ಊಟ ಮಾಡಬಾರದು.
ಹೊಟ್ಟೆ ಕಿಚ್ಚು
ಹೆಚ್ಚಾದಾಗ, ಅವರು ಕೆಟ್ಟ ಮಾತನ್ನು ಬಳಸುತ್ತಾರೆ. ನಮಗೆ ಗೆಲುವು
ಖಚಿತವಾಗಿದೆ ಎಂದರು.