ಭವ್ಯ ಭಾರತದ ಭವಿಷ್ಯಕ್ಕಾಗಿ ಗ್ರಾಮದ ಪ್ರತಿಯೊಬ್ಬರು ಮತ ಚಲಾಯಿಸಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ .
ನಾಯಕನಹಟ್ಟಿ:: ಗ್ರಾಮದ ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ. ಸೂಕ್ತ ಅಭ್ಯರ್ಥಿಗೆ ಮತ ನೀಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಪಿ ಎ ಮುತ್ತಯ್ಯ ಹೇಳಿದರು.
ಸಮೀಪದ ನಲಗೇತನಹಟ್ಟಿ ಗ್ರಾಮದಲ್ಲಿ ಮತದಾನ ಮಾಡಿ ಮಾತನಾಡಿದ ಅವರು ಗ್ರಾಮದ ಪ್ರತಿಯೊಬ್ಬ ನಾಗರಿಕರು ಹೆಣ್ಣಾಗಲಿ ಗಂಡಾಗಲಿ ನಿಮ್ಮ ಹಕ್ಕನ್ನು ಚಲಾಯಿಸಿ ನಿಮ್ಮ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕಿದೆ ತಪ್ಪದೇ ಗ್ರಾಮದ ಪ್ರತಿಯೊಬ್ಬರು ಮತದಾನ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ಜಿ ಎಸ್ ಪ್ರಹ್ಲಾದ್, ನಿಂಗರಾಜ್, ಬೋರಯ್ಯ, ಈಗಲೂ ಬೋರಯ್ಯ, ಎಂ ಬಿ ಸಣ್ಣ ಬೋರಯ್ಯ ಇದ್ದರು.