ಚಿತ್ರದುರ್ಗ : ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಿತ್ರದುರ್ಗ ಜಿಲ್ಲಾ ಮಹಿಳಾ ಠಾಣೆಯ ಪ್ರಭಾರೆ ಪೊಲೀಸ್ ನಿರೀಕ್ಷಕರಾದ ಈ ಕಿರಣ್ ಕುಮಾರ್ ತಂಡ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳ್ಕೆಕೆರೆ ಪಟ್ಟಣದ ಪ್ರಜ್ವಲ್ ಡಿಲಕ್ಸ್ ಲಾಡ್ಜ್ ನಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಮೈಸೂರಿನ ಒಡನಾಡಿ ಸ್ವಯಂ ಸೇವಾ ಸಂಸ್ಥೆ ಮತ್ತು ಪಂಚರೊಂದಿಗೆ ದಾಳಿ ಮಾಡಿದ್ದು ಪ್ರಜ್ವಲ್ ಡಿಲಕ್ಸ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದ ಒಬ್ಬ ಮಹಿಳೆಯನ್ನು ಸಂರಕ್ಷಿಸಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ
ಸದ್ದಾಮ್ ಹುಸೇನ್ ಮಜ್ಜಗುಡ್ಡ ಗ್ರಾಮ ಅಣ್ಣಿಗೆರೆ ಹೋಬಳಿ ನವಲಗುಂದ ತಾಲೂಕು ಧಾರವಾಡ ಜಿಲ್ಲೆ, ಬಸವಣ್ಣ ಅಡಿಗೆ ಭಟ್ಟರ ಕೆಲಸ ಮಲಗುಂಡಿ ಗ್ರಾಮ ಹುರ್ ಪೋಸ್ಟ್ ಹುಲ್ಲಾಳ ಹೋಬಳಿ ನಂಜನಗೂಡು ತಾಲೂಕು ಮೈಸೂರು ಜಿಲ್ಲೆ ಹಾಗೂ ಮಹದೇವಸ್ವಾಮಿ ಹೋಟೆಲ್ ಕೆಲಸ ಮಲಗುಂಡಿ ಗ್ರಾಮ ಹುರ್ ಪೋಸ್ಟು ಹುಲ್ಲಾಳ ನಂಜನಗೂಡು ತಾಲೂಕು ಮೈಸೂರು ಜಿಲ್ಲೆ
ಈ ಮೂವರು ಪಟ್ಟಣದ ಪ್ರಜ್ಬಲ್ ಡೀಲಕ್ಸ್ ಲಾಡ್ಜಿನಲ್ಲಿ ಶೌಚಾಲಯ ಗೋಡೆಯಲ್ಲಿ ಸುರಂಗ ನಿರ್ಮಿಸಿ ಈ ಸುರಂಗದಲ್ಲಿ ಸಂತ್ರಸ್ತೆ ಮಹಿಳೆಯನ್ನು ಬಚ್ಚಿಟ್ಟಿರುವುದು ತನಿಖೆಯಲ್ಲಿ ಕಂಡುಬರುತ್ತದೆ.
ಈ ಪ್ರಕರಣದಲ್ಲಿ ತನಿಖೆ ಮುಂದುವರಿಸಲಾಗಿದೆ
ಈ ದಾಳಿಯನ್ನು ಯಶಸ್ವಿಯಾಗಿ ಸಂಘಟಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಸಹಕಾರವನ್ನು ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ್ ಶ್ಲಾಘಿಸಿರುತ್ತಾರೆ.