ಚಳ್ಳಕೆರೆ ನ್ಯೂಸ್ : ಅದ್ದೂರಿಯಾಗಿ ನೆಡೆದ ತಮಟಕಲ್ಲು ಆಂಜನೇಯ
ಸ್ವಾಮಿ ರಥೋತ್ಸವ
ಬೇಡಿ ಬಂದ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೈವ
ತಮಟಕಲ್ಲು ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ
ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಚಿತ್ರದುರ್ಗ ತಾಲೂಕಿನ ತಮಟಕಲ್ಲು ಆಂಜನೇಯಸ್ವಾಮಿ ಬೇಡಿ
ಬರುವ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆಂಬ ಪ್ರತೀತಿ ಇದೆ.
ಪ್ರತೀ ವರ್ಷದಂತೆ ಈ ಬಾರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ
ಆಂಜನೇಯಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ತಮಟಕಲ್ಲು ಸೇರಿದಂತೆ ಸುತ್ತಲ 10 ಹಳ್ಳಿಗಳ ಗ್ರಾಮಸ್ಥರು ಜಾತ್ರೆಗೆ
ಆಗಮಿಸಿ ಆಂಜನೇಯಸ್ವಾಮಿ ದರ್ಶನ ಪಡೆದರು.