ಚಳ್ಳಕೆರೆ ನ್ಯೂಸ್ :
ಕಾರಜೋಳ ಸುಳ್ಳು ಮಾತಿನಿಂದ ಮೋಸ
ಮಾಡುತ್ತಿದ್ದಾರೆ
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಚಿತ್ರದುರ್ಗ
ಲೋಕಸಭಾ ಕ್ಷೇತ್ರದ ಮತದಾರರನ್ನು ಸುಳ್ಳು ಮಾತುಗಳಿಂದ
ಮೋಸ ಮಾಡುತ್ತಿದ್ದಾರೆ ಎಂದು
ಕೆಪಿಸಿಸಿ ರಾಜ್ಯ ವಕ್ತಾರರಾದ ಬಾಲಕೃಷ್ಣ ಯಾದವ್ ಹೇಳಿದರು.
ಅವರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಸುಳ್ಳು ನಂಬಿ ಮತದಾರರು ಮತ ನೀಡುತ್ತಾರೆಂದು ಕನಸು
ಕಾಣುವುದನ್ನು ಬಿಡಬೇಕು.
500 ಕಿ. ಮೀ. ದೂರದಿಂದ ಬಂದಿರುವ
ಅವರನ್ನು ಮತದಾರರು ಗೋ ಬ್ಯಾಕ್ ಎನ್ನುತ್ತಿದ್ದಾರೆ ಎಂದರು.