ಚಳ್ಳಕೆರೆ ನ್ಯೂಸ್ :
ಮತದಾನ ಬಹಿಷ್ಕರಿಸಿ ಹಕ್ಕನ್ನು ಕಳೆದುಕೊಳ್ಳಬೇಡಿ
ಅಭಿವೃದ್ಧಿ ಕೆಲಸವಾಗಿಲ್ಲವೆಂದು ಯಾರೂ ಕೂಡ
ಮತದಾನ ಬಹಿಷ್ಕರಿಸಬೇಡಿ ಇದರಿಂದ ನಿಮ್ಮ ಹಕ್ಕನ್ನು
ಕಳೆದುಕೊಂಡಂತಾಗುತ್ತದೆ ಎಂದು ಡಿಸಿ ವೆಂಕಟೇಶ್ ಹೇಳಿದರು.
ಅವರು ಚಿತ್ರದುರ್ಗದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ
ನಡೆದ ಚುನಾವಣೆ ನೀತಿ ಸಂಹಿತೆ ಮಾಧ್ಯಮ ಸಂವಾದ
ಉದ್ಘಾಟಿಸಿ ಮಾತಾಡಿದರು.
ಮತದಾನದ ಮೂಲಕ ಉತ್ತಮರನ್ನು
ಆರಿಸಿಕೊಳ್ಳಬೇಕು, ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಒತ್ತಡ
ಹಾಕಬೇಕು. ಬಹಿಷ್ಕಾರದ ಸಮಸ್ಯೆಗಳಿದ್ದರೆ ಆ ಸ್ಥಳಗಳಿಗೆ ಭೇಟಿ
ನೀಡಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದರು.