ಚಳ್ಳಕೆರೆ : ಹಣವನ್ನು ಪಣವಾಗಿ ಇಟ್ಟು ಮಟ್ಕಾ ಹಾಡಿಸುತ್ತಿದ್ದ ಮಹಿಳೆ ಮೇಲೆ ಪ್ರಕರಣ ದಾಖಲಾದ ಪ್ರಸಂಗ ಚಳ್ಳಕೆರೆ ನಗರ ಠಾಣೆಯಲ್ಲಿ ನಡೆದಿದೆ.
ಹೌದು ಚಳ್ಳಕೆರೆ ನಗರದ ಇಂಜಯ್ಯನಹಟ್ಟಿಯಲ್ಲಿ ಸಾರ್ವಜನಿಕರನ್ನು ಗುಂಪು ಕಟ್ಟಿಕೊಂಡು ಮಟ್ಕಾ ಹಾಡಿಸುತ್ತಿದ್ದ ಮಹಿಳೆ ನಾಗವೇಣಿ ಎಂಬುವವರು ಮಟ್ಕಾ ಚೀಟಿಗಳನ್ನು ಬರೆದು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಲೆ ಬಿಸಿದ ಪೊಲೀಸರು ಮಹಿಳೆಯಿಂದ ಸುಮಾರು 2060 ರೂಪಾಯಿ ಹಾಗು ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡ ಪಿಎಸ್ಐ ಕೆ ಸತೀಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.