ಚಳಕೆರೆ ನ್ಯೂಸ್ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಚಳ್ಳಕೆರೆ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮ ಕುಮಾರಿ ಈಶ್ವರಿಯ ವಿಮಲಾ ಅಕ್ಕನವರು ಹೇಳಿದ್ದಾರೆ.
ಅವರು ನಗರದ ಬ್ರಹ್ಮಕುಮಾರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ಸಭಾಂಗಣದಲ್ಲಿ ಮಾತನಾಡಿದ ಅವರು ವಿಶ್ವಕ್ಕೆ ಭಾರತದ ವಿಶಿಷ್ಟ ಕೊಡುಗೆ ಬಿಂಬಿಸುವ, ನನ್ನ ಭಾರತ ಮಹಾನ್ ಭಾರತ ಪ್ರದರ್ಶನ ದೊಂದಿಗೆ ಮಹಾಶಿವರಾತ್ರಿ ಅಂಗವಾಗಿ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ, ಚಳ್ಳಕೆರೆ ನಗರದ ಬಿಎಮ್ ಜಿ ಎಚ್ ಎಸ್ ಪ್ರೌಢಶಾಲಾ ಮೈದಾನದ ಆವರಣದಲ್ಲಿ ಮಾರ್ಚ್ 7ರಂದು ಮೊದಲ ದಿನವಾದ ಉದ್ಘಾಟನಾ ಮಹೋತ್ಸವ ಅಂದು ವಿದ್ಯಾರ್ಥಿ ಉತ್ಸವ ಸ್ವರ್ಣ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಯ ಪಾತ್ರ ಅದರಂತೆ ಎರಡನೇ ದಿನವಾದ ಮಾರ್ಚ್ 8ರಂದು ಶಿವರಾತ್ರಿ ಉತ್ಸವ ಜಾಗರಣ ಮಹೋತ್ಸವ ಆಧ್ಯಾತ್ಮ ಜಾಗೃತಿಯಿಂದಲೇ ವಿಶ್ವದ ಪರಿವರ್ತನೆ, ಇನ್ನು ಮೂರನೇ ದಿನವಾದ ಮಾರ್ಚ್ 9 ರಂದು ಅಂತರಾಷ್ಟ್ರೀಯ ಮಹಿಳಾ ಮಹೋತ್ಸವ ಆಧುನಿಕ ಮಹಿಳೆಗೆ ಬರುವ ಸವಾಲುಗಳು ಹಾಗೂ ಅದರ ನಿವಾರಣೋಪಾಯಗಳು

ಪ್ರಪಥಮ ಬಾರಿಗೆ ಅಂತಲಿAðಗ ದರ್ಶನ ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ತೇಲುವ ಅದ್ಬುತ ಲಿಂಗ 40 ಶಿವಲಿಂಗದೊಳಗಡೆ ಜಗವಗಿಸುವ ಭಾರತ, ಭಾರತದ ಒಳಗಡೆ ದ್ವಾದಶಿ ಜ್ಯೋತಿರ್ಲಿಂಗ ಪ್ರತಿಷ್ಟಾಪನೆ.
ಮಾರ್ಚ್ 7.ರಂದು ಉದ್ಘಾಟನಾ ಮಹೋತ್ಸವ ಸಂಜೆ ಆರು ಗಂಟೆಗೆ ಬಿಸಿನೀರು ಮುದ್ದಪ್ಪ ಶಾಲಾ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಸುರೇಶ್ ರವರಿಂದ ನಡೆಯುತ್ತದೆ ಅದರಂತೆ ಅಂದಿನ ಮುಖ್ಯ ಅತಿಥಿಗಳಾಗಿ ಭಾರತೀಯ ಜೀವ ವಿಮಾ ನಿಗಮ ಶಾಖ ವ್ಯವಸ್ಥಾಪಕರಾದ ಕೆಪಿ ಚೆನ್ನಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಎಂ. ರವೀಶ್, ಜಯಣ್ಣ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲರದ ದೇವರಾಜ್ ವಾಸವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವೆಂಕಟಶಿವಾರೆಡ್ಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀರಾಮುಲು, ಅಂದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಆಯೋಜಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಸ್ವರ್ಣ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಈಶ್ವರಿಯ ಸಂದೇಶ ಕಾರ್ಯಕ್ರಮ ಇರುತ್ತದೆ, ಎರಡನೇ ದಿನವಾದ ಮಾರ್ಚ್ 8.ರಂದು ಶಿವರಾತ್ರಿ ಮಹೋತ್ಸವ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯ ಶಾಸಕ ಟಿರಗಮೂರ್ತಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ರೆಹನ್ ಪಾಷ, ಡಿವೈಎಸ್‌ಪಿ ಬಿಟಿ. ರಾಜಣ್ಣ, ಅಂದಿನ ಕಾರ್ಯಕ್ರಮದ ಪರಿಸರ ಸ್ವಚ್ಛಗೊಳಿಸುವಂತಹ ನಗರದ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಇನ್ನು ಮಾರ್ಚ್ ಮೂರನೇ ದಿನವಾದ ಮಾರ್ಚ್ 9.ರಂದು ಪೂಜ್ಯ ಮಾತಾಜಿ ತ್ಯಾಗಮಯಿ ಶ್ರೀ ಶಾರದಾಶ್ರಮ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋಣಿ, ವೀರಶೈವ ಮಹಿಳಾ ವೇದಿಕೆ ಅಧ್ಯಕ್ಷರಾದ ಪದ್ಮ ನಾಗರಾಜ್, ಅಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ವಿಜೇತರಾದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೀಡಲಾಗುವುದು ಹೀಗೆ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯ ಜಾಗರಣ ಮಹೋತ್ಸವ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಜರುಗಲಿದೆ.

ಈ ಮಹೋತ್ಸವಕ್ಕೆ ತಾಲೂಕಿನ ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕೆಂದು ಶುಭಾ ಕೋರಿದ್ದಾರೆ.

ಇದೇ ಸಂಧರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿಯ ಇಂದು ಅಕ್ಕಾ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎನ್.ಓಬಳೇಶ್, ಎಲ್ ಐಸಿ ರಂಗಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!