ಬರಗಾಲದ ನಡುವೆ ಕಲೆಗೆ ಪ್ರೋತ್ಸಹಿಸುವ ಮತ್ತು ಕಲೆಯ ತವರೂರು ಎಂದೇ ಖ್ಯಾತಿ ಪಡೆದಿರುವ ಗ್ರಾಮ ಜೋಗಿಹಟ್ಟಿ ಬಿಜೆಪಿ ನಾಯಕನಹಟ್ಟಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್ ಬಿ ಬಾಲರಾಜ್ ಯಾದವ್ ಅಭಿಪ್ರಾಯ ಪಟ್ಟರು
ನಾಯಕನಹಟ್ಟಿ:: ನಮ್ಮ ಜೋಗಿಹಟ್ಟಿ ಗ್ರಾಮದಲ್ಲಿ ಬರಗಾಲದ ನಡುವೆ ಕಲೆಗೆ ಪ್ರೋತ್ಸಾಹ ನೀಡುವ ಕಲಾವಿದರ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ನಾಯಕನಹಟ್ಟಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್ ಬಿ ಬಾಲರಾಜ್ ಯಾದವ್ ತಿಳಿಸಿದ್ದಾರೆ.
ಅವರು ಸಮೀಪದ ಜೋಗಿಹಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ರಕ್ತ ಸಿಂಧೂರ ಅರ್ಥಾತ್ ಮದುವೆಗೆ ತಂದ ಮರಣ ಎಂಬ ಸುಂದರ ಸಾಮಾಜಿಕ ನಾಟಕಕ್ಕೆ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು. ಬರೆದ ಛಾಯೆ ಆವರಿಸಿದೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜೋಗಿಹಟ್ಟಿ ಕಲಾವಿದರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರೀರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ (ಗುಗ್ಗರಿಹಬ್ಬ)ದ ಪ್ರಯುಕ್ತ ಈ ಬಾರಿ ಸಹ ರಕ್ತ ಸಿಂಧೂರ ಅರ್ಥಾತ್ ಮದುವೆಗೆ ತಂದ ಮರಣ ಎಂಬ ಸುಂದರ ಸಾಮಾಜಿಕ ನಾಟಕವನ್ನು ಕಲಾವಿದರು ಅಭಿನಯಿಸುತ್ತಿದ್ದು.
ಈ ನಾಟಕದಲ್ಲಿ ಬರುವ ಸನ್ನಿವೇಶಗಳು ಸಮಾಜದಲ್ಲಿ ನಡೆಯುವಂತಹ ಘಟನೆಗಳನ್ನು ಸಂಗ್ರಹಿಸಿ ಕವಿಗಳು ಬರೆದಿರುತ್ತಾರೆ.
ಪ್ರತಿಯೊಬ್ಬ ಮನುಷ್ಯರು ಈ ನಾಟಕದಲ್ಲಿ ಬರುವ ಸನ್ನಿವೇಶಗಳನ್ನು ಒಳ್ಳೆಯದನ್ನು ತಿಳಿದುಕೊಳ್ಳಬೇಕು ಕೆಟ್ಟದ್ದನ್ನು ಬಿಡಬೇಕು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಇಂತಹ ನಾಟಕಗಳು ನಮ್ಮ ಜೀವಕ್ಕೆ ಸ್ಪೂರ್ತಿ.
ಕಲಾವಿದರು ಪ್ರತಿಭೆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನಾಗಿ ನೀಡುವುದು ಕಲಾವಿದರ ಪಾತ್ರ ಮಹತ್ವದ್ದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯ ಹಾಗೂ ಗ್ರಾಮ ಪಂಚಾಯತಿ ಒಕ್ಕೂಟದ ಉಪಾಧ್ಯಕ್ಷ ಎಸ್. ವೆಂಕಟೇಶ್ ದಳಪತಿ, ಎಮ್ ಎಚ್ ಲಕ್ಷ್ಮಣ್ , ಕೆಂಗ ರುದ್ರಪ್ಪ ಮಲ್ಲೂರಹಟ್ಟಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ ಜಿ ಗೋವಿಂದಪ್ಪ,
ಸಂಗೀತ ನಿರ್ದೇಶಕರಾದ ಕೆಎನ್ ನಾಗೇಂದ್ರಪ್ಪ ಎಚ್ ಶಿವಮೂರ್ತಿ, ಸಿ ರುದ್ರೇಶ್, ಎ. ಚಂದ್ರಪ್ಪ , ದಿಬ್ಬದಹಳ್ಳಿ ಗೋವಿಂದಪ್ಪ, ಎ ಜಿ ಮಂಜಣ್ಣ, ಎಸ್ ಭದ್ರಪ್ಪ, ಸಿ ಬಿ ಕೃಷ್ಣಪ್ಪ,
ಎಸ್ ಡಿ ಎಂ ಸಿ ಅಧ್ಯಕ್ಷ ಡಿ. ಬಿ. ಬಾಲರಾಜು, ಮಾಜಿ ಎಸ್ ಡಿ ಎಂ ಸಿ.ಅಧ್ಯಕ್ಷ ಎ.ಜಿ. ಗೋವಿಂದಪ್ಪ. ಸ್ಟೇಜ್ ಮೆನೇಜರ್ ಈ ತಿಪ್ಪೇಸ್ವಾಮಿ, ಬಾಲರಾಜ್, ಸಿಸಿಬಿ ಗೋವಿಂದಪ್ಪ, ಶಿವಣ್ಣ, ಕಥಾ ಸಂಚಾಲಕರಾದ ಮೇಘರಾಜ್ ಸಿಬಿ ಬಿಬಿ ಕರಿಬಸವರಾಜ್,ಕೆ ಜಿ ಮಂಜುನಾಥ್, ಸೇರಿದಂತೆ ಸಮಸ್ತ ಜೋಗಿಹಟ್ಟಿ ಕಲಾವಿದರು ಗ್ರಾಮಸ್ಥರು ಇದ್ದರು