ಪೂಜ್ಯ ಸ್ವಾಮೀ ಜಪಾನಂದ ಜಿ ಅವರು ಭೀಕರ ಬೇಸಿಗೆಯ ಸಲುವಾಗಿ ಮುಂದುವರಿತ್ತಿರುವ ಮೇವು ವಿತರಣಾ ಯೋಜನೆಗಳನ್ನು ಪರಿಶೀಲಿಸಿದರು. ಈ ಯೋಜನೆ ಅನೇಕ ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ,ತಾಲೂಕು ಮೊಣಕಾಲ್ಮೂರು, ನಾಯಕನಹಟ್ಟಿ ಕೂಡ್ಲಿಗಿ ಆಯಕಲ್ ,ಬಿಜಿಕೆರೆ, ಅಜ್ಜಯ್ಯನ ಗುಡಿ, ಬೊಮ್ಮದೇವರ ಹಟ್ಟಿ ,ಹೀಗೆ ನಾನಾ ಬುಡಕಟ್ಟಿನ ದೇವರ ಹಸುಗಳನ್ನು ಕಳೆದ ಹಲವಾರು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲೂ ಮೇವು ವಿತರಿಸುತ್ತಿದ್ದರೆ ಈ ವರ್ಷ ಅಂದರೆ 20 23 ಮಾರ್ಚ್ ಇಂದ ಈವರೆಗೂ ಸರಿಸುಮಾರು ಇನ್ನೂರ ತೊಂಬತ್ತು ಟನ್ ಮೇ ವನ್ನು ವಿತರಿಸಿರುತ್ತಾರೆ .ಇಂದು ಈ ಹಟ್ಟಿಗಳ ಗೋಪಾಲಕರು ಹಾಗೂ ಕಿಲಾಡಿಗಳು ಪೂಜ್ಯ ಸ್ವಾಮೀಜಿಯವರಿಗೆ ಮತ್ತೊಂದು ಮನವಿಯನ್ನು ಮಾಡಿ ಭಯಂಕರ ಬಿಸಿಲಿನ ತಾಪದಿಂದ ಅನೇಕ ಗೋವುಗಳು ಸರಿಯಾದ ವ್ಯವಸ್ಥೆ ಹಾಗೂ ಮೇವಿಲ್ಲದೆ ಪ್ರಾಣವನ್ನು ಬಿಡುತ್ತಿವೆ ಹಾಗಾಗಿ ಶ್ರೀಮತಿ ಸುಧಾ ಮೂರ್ತಿ ಹಾಗೂ ಶ್ರೀ ನಾರಾಯಣ ಮೂರ್ತಿರವರ ಮೂರ್ತಿ ಟ್ರಸ್ಟ್ ಮೂಲಕ ಮಳೆ ಬರುವವರೆಗೆ ಮೇವನ್ನು ವಿತರಿಸಬೇಕೆಂದು ವಿನಂತಿಸಿಕೊಂಡರು .ಪೂಜ್ಯ ಸ್ವಾಮೀಜಿಯವರು ಅದೇ ರೀತಿ ತಮ್ಮ ಕೈಲಾದಷ್ಟು ಘೋಸೇವೆಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು .ಅನೇಕ ಕಿಲಾರಿಗಳು ಹಾಗೂ ಗೋಪಾಲಕರು ಬೆಂಗಳೂರಿನಿಂದ ಬಂದಂತಹ ಅತಿಥಿ ಗಳಿಗೆ ಪೂಜ್ಯ ಸ್ವಾಮಿ ಜಪಾನಂದ ಜಿ ಯವರು ಈ ಪ್ರದೇಶಕ್ಕೆ ಬರದಿದ್ದರೆ ನೂರಾರು ಗೋವುಗಳು ಪ್ರಾಣವನ್ನು ಬಿಡಬೇಕಾಗಿತ್ತು. ಆದರೆ ಪೂಜ್ಯರು ಈ ಗೋವುಗಳ ಮೇಲೆ ಅತ್ಯಂತ ಶ್ರದ್ಧಾ ಭಕ್ತಿಯಿಟ್ಟು ಸೇವೆ ಸಲ್ಲಿಸುತ್ತಿರುವುದರಿಂದ ಉಳಿದುಕೊಂಡಿವೆ ಎಂದು ಮಾಧ್ಯಮದವರಿಗೆ ನೈಜ ಚಿತ್ರ ಹಾಗೂ ಪೂಜ್ಯ ಸ್ವಾಮಿ ಜಪಾನಂದಜಿಯವರ ಸೇವಾ ಯಜ್ಞವನ್ನು ಹೃತ್ಪೂರ್ವಕವಾಗಿ ಹಾಗೂ ಹೃದಯ ತುಂಬಿ ವಿವರಿಸುತ್ತಿದ್ದರು ಅದೇನೇ ಇರಲಿ . ಈ ಬೇಸಿಗೆಯ ಸಂದರ್ಭದಲ್ಲಿ ಸಾವಿರಾರು ಗೋವುಗಳನ್ನು ಪೂಜ್ಯ ಸ್ವಾಮೀಜಿಯವರೇ ಕಾಪಾಡಬೇಕೆಂದು ಮನವಿ ಮಾಡಲು ಮತ್ತೊಂದು ಕಾರಣವೇನೆಂದರೆ ಈ ದೇವರ ಎತ್ತುಗಳು ಹಾಗೂ ಹಸುಗಳಿಗೆ ಈ ವರವಿಗೆ ಘನ ಸರ್ಕಾರದಿಂದ ಯಾವುದೇ ರೀತಿಯ ಸಹಾಯ ದೊರಕದೆ ಹಸುಗಳು ಹಸುವೆಯಿಂದ ಬಳಲುತ್ತಿರುವುದಂತೂ ನಿಜ. ಈ ಕಾರಣದಿಂದ ಇಂದು ಎಂದಿನಂತೆ ಪೂಜ್ಯ ಸ್ವಾಮೀ ಜಪಾನಂದ ದೇವರು ಈ ಹಟ್ಟಿಗಳಿಗೆ ಭೇಟಿ ನೀಡಿ ಮೇವುಗಳನ್ನು ವಿತರಿಸುವುದಲ್ಲದೆ ಮುಂದಿನ ಜೂನ್ ವರೆಗೆ ಅಂದರೆ ಮಳೆ ಬರುವವರೆಗೆ ಶ್ರೀಮತಿ ಸುಧಾ ಮೂರ್ತಿ ಹಾಗೂ ಶ್ರೀ ನಾರಾಯಣ ಮೂರ್ತಿ ರವರ ಸಹಕಾರದಿಂದ ಮೇವನ್ನು ವಿತರಿಸುತೇವೆ ಎಂದು ಭರವಸೆ ನೀಡಿದರು .ಎಲ್ಲಾ ಗೋಪಾಲಕರು ಹಾಗೂ ಕಿಲಾ ರೀ ಗಳು ಪೂಜ್ಯ ಸ್ವಾಮೀಜಿಯವರಿಗೆ ಮ್ಯಾಸನಾಯಕ ದೇವರ ಪರವಾಗಿ ಭಕ್ತಿ ಗೌರವಗಳನ್ನು ಸೂಚಿಸಿದರು .ಇದೇ ಅಲ್ಲವೇ ನಿರಂತರ ಸೇವಾ ಯಜ್ಞ ಸ್ವಾಮಿ ವಿವೇಕಾನಂದರು ಬಯಸಿದ್ದು!
ಈ ಸಂದರ್ಭದಲ್ಲಿ ಸ್ಥಳೀಯ ಶ್ರೀರಾಮಕೃಷ್ಣ ಸೇವಾಶ್ರಮದ ಸಂಯೋಜಕರಾದ ಶ್ರೀ ಸಿಪಿ ಮಹೇಶ್ ಹಾಗೂ ಶ್ರೀ ಸಿದ್ದೇಶ್ ಮತ್ತು ಯಜಮಾನರುಗಳು ಕಿಲಾರಿ ಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗೋಪಾಲಕರು ಉಪಸ್ಥಿತರಿದ್ದರು .ಎಲ್ಲರ ಒಂದೇ ಮನವಿ ಪೂಜ್ಯ ಸ್ವಾಮೀಜಿಯವರಿಗೆ ಏನೆಂದರೆ, ಮಳೆ ಬರುವವರೆಗೆ ದೇವರ ಎತ್ತುಗಳನ್ನು ಪೂಜ್ಯ ಸ್ವಾಮೀಜಿ ರವರು ಹಾಗೂ ಶ್ರೀಮತಿ ಸುಧಾ ಮೂರ್ತಿ ರವರ ಮೂರ್ತಿ ಟ್ರಸ್ಟ್ ಮೂಲಕ ಮೇ ವನ್ನು ಸರಬರಾಜ ಮಾಡಬೇಕೆಂದು ಪ್ರಾರ್ಥಿಸಿಕೊಂಡರು.

Namma Challakere Local News
error: Content is protected !!