ನಾಯಕನಹಟ್ಟಿ:: ಜ.23. ನೂತನ ಜಿಲ್ಲಾಧಿಕಾರಿಯಾಗಿ ಟಿ ವೆಂಕಟೇಶ್ ಮಂಗಳವಾರದಂದು ಬೆಳಗ್ಗೆ ಹತ್ತು ಘಂಟೆಗೆ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಒಳಮಠ ಮತ್ತು ಹೊರಮಠ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನಂತರ ನೂತನ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರಿಗೆ ಹೂಗುಚ್ಚ ಮತ್ತು ಪುಷ್ಪಮಾಲೆ ಹಾಕುವುದರ ಮುಖಾಂತರ ತಹಸಿಲ್ದಾರ್ ರೆಹೇನಾ ಪಾಷಾ. ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಣಧಿಕಾರಿ ಎಚ್. ಗಂಗಾಧರಪ್ಪ. ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ರವಿಶಂಕರ್, ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಎಲ್ ಲಿಂಗೇಗೌಡ, ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯ ಅಧಿಕಾರಿ ಎಂ ಶಿವಕುಮಾರ್, ನಾಡಕಚೇರಿ ಉಪತಹಶೀಲ್ದಾರ್ ಬಿ. ಶಕುಂತಲಾ, ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಪಟ್ಟಣ ಪಂಚಾಯತಿ ಸದಸ್ಯರಾದ ಜೆ ಆರ್ ರವಿಕುಮಾರ್, ವಕೀಲ ಉಮಾಪತಿ, ದಳವಾಯಿ ರುದ್ರಮುನಿ ,ಸುನಿಲ್, ದೇವಸ್ಥಾನದ ಸಿಬ್ಬಂದಿಗಳಾದ ಎಸ್ ಸತೀಶ್, ಮನು, ಪಿಎಸ್ಐ ದೇವರಾಜ್ ,ಪಿಎಸ್ಐ- 2 ಶಿವಕುಮಾರ್ ,ಸೇರಿದಂತೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನ ಸಿಬ್ಬಂದಿಗಳು ಇದ್ದರು