ಚಳ್ಳಕೆರೆ : ಶ್ರೀ ಬಸವೇಶ್ವರ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಕಾರ್ತಿಕೋತ್ಸವ ಸೋಮವಾರ ರಾತ್ರಿ 12 ಗಂಟೆಗೆ ಬಲಿ ಅನ್ನ ಹಾಕುವ ಮೂಲಕ ಶೂನ್ಯದ ಮಾಸದಲ್ಲಿ ನಡೆಯುವ ಜಿಲ್ಲೆಯ ಏಕೈಕ ಕಾರ್ತಿಕೋತ್ಸವ ಇದಾಗಿದೆ.
ಇನ್ನೂ ಇಡೀ ಜಿಲ್ಲೆಯಲ್ಲಿ ಮಧ್ಯರಾತ್ರಿ ರಥೋತ್ಸವ ಜರುಗುವ ಏಕೈಕ ಗ್ರಾಮ ಚನ್ನಗಾನಹಳ್ಳಿ ಗ್ರಾಮವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಶೂನ್ಯ ಮಾಸದಲ್ಲಿ ನಿಗಧಿಯಾಗಿದ್ದ ಕಾರ್ತಿಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರೆವೆರಿತು.
ಇನ್ನೂ ಸುತ್ತ ಮುತ್ತಲಿನ ಗ್ರಾಮಗಳಿಂದ ಶ್ರೀ ಬಸವೇಶ್ವರ ಕಾರ್ತಿಕೋತ್ಸವಕ್ಕೆ ಆಗಮಿಸಿದ ಭಕ್ತರು ಮಧ್ಯ ರಾತ್ರಿಯವರೆಗೆ ನಂಧಿಕೋಲು, ಕಂಸಾಳೆ, ಮೂಲಕ ರಥೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿತು.
ನಂತರ ರಥೋತ್ಸವದ ಮುಂಬಾಗ ನಂಧಿಕೋಲು, ಕಂಸಾಳೆ, ಡೋಲು ಕುಣಿತಕ್ಕೆ ಅದಿಹರೆಯದ ಯುವಕರು ಹೆಜ್ಜೆ ಹಾಕುತ್ತಾ ಜೈ ಬಸವೇಶ್ವರ ಎಂಬ ಜಯಘೋಷಗಳನ್ನು ಕೂಗುತ್ತಾ ರಥೋತ್ಸವಕ್ಕೆ ಮುಂದೆ ಸಾಗಿತು
ವಾಡಿಕೆ : ಪುರಾತನ ಕಾಲದಿಂದ ವಾಡಿಕೆ ಪ್ರಕಾರ ಊರಿನ ಗೌಡರ ಮನೆಯಿಂದ ರಥೋತ್ಸವಕ್ಕೆ ಪೂಜೆ ಸಲ್ಲಿಸಲು ಅನ್ನದ ಬಾನೆಯಿಂದ ಹೆಡೆ ತಂದು ರಥೋತ್ಸವದ ನಾಲ್ಕು ಚಕ್ರಗಳಿಗೂ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಐದು ಬಾಗಸ್ತರು ಪೂಜೆಯ ಹೆಡೆಬಾನೆಯನ್ನು ಹಂಚುವು ಮೂಲಕ ಇಂದಿನವರೆಗೆ ನಡೆದುಕೊಂಡು ಬಂದ ಪದ್ದತಿಯಾಗಿದೆ, ಅದರಂತೆ ಗೌಡರ ಚೆನ್ನಪ್ಪ ರವರ ಮನೆಯಿಂದ ಈ ಬಾರಿ ನಡೆಯಿತು.
ರಥೋತ್ಸವದ ಮರುದಿನ ಗ್ರಾಮದ ಅರಕೆ ಹೊತ್ತ ಜನರು ಪಾನಕ ತುಂಬಿದ ಚಕಡಿ ಬಂಡಿಯಲ್ಲಿ ಗ್ರಾಮದ ಜನರಿಗೆ ವಿತರಿಸುವುದು ವಾಡಿಕೆಯಾಗಿದೆ ಅದರಂತೆ ನಾಯಕ ಜನಾಂಗದ ಗಾರೆ ಮನೆ ತಿಮ್ಮಣ್ಣ ನವರು ಕುಟುಂಬ ಪಾನಕ ಪ್ರಸಾದ ವಿತರಣೆ ಮಾಡಿದರು.
ಅದೇ ದಿನ ಮಧ್ಯಾಹ್ನ ಶ್ರೀ ಪಾತಲಿಂಗೇಶ್ವರ ಸ್ವಾಮಿಯ ಪವಾಡವೂ ನಡೆಯುತ್ತದೆ..ಶ್ರೀ ಸ್ವಾಮಿಯ ಸನ್ನಿದಾನದಲ್ಲಿ ನಡೆಯುವ ಪವಾಡಕ್ಕೆ ಸುತ್ತಲಿನ ಸಾವಿರಾರು ಭಕ್ತರು ಆಗಮಿಸುತ್ತಾರೆ…ಪೋತರಾಜರ ವೀರ ನಾಟ್ಯಕ್ಕೆ ಮನಸೋತ ಭಕ್ತರು ಗಂಗ ಸ್ಥಾನದಿಂದ ಪೋತರಾಜರ ನಾಟ್ಯವನ್ನು ಕಣ್ತುಂಬಿಕೊಂಡು ಸ್ವಾಮಿಯ ಸನ್ನಿದಾನಕ್ಕೆ ಆಗಮಿಸಿ ಅನಾದಿಕಾಲದಿಂದಲೂ ನಡೆದುಕೊಂಡ ಬಂದ ಪದ್ದತಿ ಪ್ರಕಾರ ಸ್ವಾಮಿಯ ಪವಾಡ ನಡೆಯುತ್ತದೆ.
ಇನ್ನು ಅದೇ ದಿನ ಸಂಜೆ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ತಿಕೋತ್ಸವಕ್ಕೆ ತೆರೆ ಬಿಳುತ್ತದೆ. ಒಟ್ಟಾರೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆಯುವ ಕಾರ್ತಿಕೋತ್ಸವ ಶಾಂತಿ ನೆಲೆಯಿಂದ ಶ್ರದ್ಧಾ ಭಕ್ತಿಯಿಂದ ಜರುಗುತ್ತದೆ.