ನಾಯಕನಹಟ್ಟಿ::ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ವೈದ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಕೇಂದ್ರದ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸಂಜೆಯಾದರೆ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳೆ ಇರುವುದಿಲ್ಲ, ಅಪಘಾತದಲ್ಲಿ ಗಾಯಗೊಂಡವರನ್ನು ಸಂಜೆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇಲ್ಲಿ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ಇಲ್ಲ, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ ಮೇಲ್ದರ್ಜೆಗೇರಿದರು, ಆರೋಗ್ಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲವೆಂದು ಗ್ರಾಮಸ್ಥರು ಆರೋಪಿಸಿದರು.
ಇದೆ ವೇಳೆ ಗುಂತ ಕೋಲಮ್ಮನಹಳ್ಳಿ ಗ್ರಾಮಸ್ಥರಾದ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಗೌಡ್ರು ಗುಂಡಪ್ಪ , ವಾಸಣ್ಣ, ಶ್ರೀನಿವಾಸ್, ಜಿ ಸಿ ಪಾಲಯ್ಯ, ಕೊರಡಿಹಳ್ಳಿ ಸುರೇಂದ್ರಪ್ಪ, ಪಾಪಯ್ಯ, ಮೂರ್ತಿ ಪಾಲಯ್ಯ, ಬಂಗಾರಿ ಓಬಯ್ಯ, ಪ್ರಕಾಶ್, ಎಸ್ ಶಿವತಿಪ್ಪೇಸ್ವಾಮಿ, ಈಶಣ್ಣ, ಸೇರಿದಂತೆ ಇದ್ದರು