ಚಳ್ಳಕೆರೆ : ಜ.26ರ ಗಣರಾಜ್ಯೋತ್ಸವಕ್ಕೆ ಪೂರ್ವ ತಯಾರಿಯಾಗಿ ವಿವಿಧ ಶಾಲೆಯ ಮಕ್ಕಳು ನಗರದ ಬಿಎಂಜಿಎಚ್‌ಎಸ್ ಪ್ರೌಢಶಾಲಾ ಮೈದಾನದಲ್ಲಿ ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದಾರೆ.
ಅದರಂತೆ ಜ.26 ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ಬ್ಯಾಂಡ್ ಸೆಟ್ ತಂಡ, ಹಾಗೂ ಧ್ವಜವೊಂದನೆ ಸಲ್ಲಿಸುವ ತಂಡಗಳ ತಯಾರಿ ಭರ್ಜರಿಯಾಗಿ ಸಿದ್ದತೆ ನಡೆಯುತ್ತಿದೆ. ಅದರಂತೆ ನಗರದ ಕಸ್ತೂರಿ ಬಾ ಗಾಂಧೀ ಶಾಲಾ ಮಕ್ಕಳು, ಬಿಎಂಜಿಎಚ್‌ಎಸ್ ಶಾಲಾ ಮಕ್ಕಳು, ಹೆಗ್ಗೆರೆ ತಾಯಮ್ಮ ಪ್ರೌಢಶಾಲಾ ಮಕ್ಕಳು ಆವರಣದಲ್ಲಿ ಭರ್ಜರಿಯಾಗಿ ತಾಲೀಮು ನಡೆಸುತ್ತಿರುವುದು ಕಂಡು ಬಂದಿದೆ.
ಇನ್ನೂ ಇದಕ್ಕೆ ದೈಹಿಕ ಶಿಕ್ಷಕ ವರ್ಗಕೂಡ ಸಾಥ್ ನೀಡುತ್ತಾ ತಾಲೀಮು ನಡೆಸುತ್ತಿದೆ.