ಚಳ್ಳಕೆರೆ ತಾಲೂಕಿನ ವರವುಕಾವಲು ಜಮೀನುಗಳಲ್ಲಿ ಜೆಸಿಪಿ ಹಾಗೂ ಟಿಪ್ಪರ್ ಬಳಸಿ ಅಕ್ರಮವಾಗಿ ಮಣ್ಣು ಸಾಗಟ ಮಾಡುತ್ತಿದ್ದಾರೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ವಾಹನಗಳನ್ನು ನಿಲ್ಲಿಸದೆ ವಾಹನ ಪರಾರಿಯಾಗಿದ್ದಾರೆ.
ರೈತರ ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೆ ರಸ್ತೆ ಕಾಮಗಾರಿಗೆ ಲೇಔಟ್ ಗಳ ಅಭಿವೃದ್ಧಿಗೆ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದಾರೆ ಇದರಿಂದ ರೈತರು ಬೆಳೆದ ಮೂಸುಂಬೆ ಬೆಳೆ ತೊಗರಿ ಬೆಳೆ ಇನ್ನಿತರೆ ಬೆಳೆಗಳು ಹಾಳಾಗುತ್ತಿದೆ
ರೈತರು ಎಷ್ಟೇ ಹೇಳಿದರು ರೈತರ ಮಾತಿಗೆ ಕ್ಯಾರೆ ಅನ್ನದೆ ರೈತರ ಜಮೀನುಗಳಲ್ಲಿ ರೈತರು ಇಲ್ಲದ ಸಮಯದಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಲೇಔಟ್ ಹಾಗೂ ರಸ್ತೆ ಅಭಿವೃದ್ಧಿಗೆ ಬಳಸುತ್ತಿದ್ದಾರೆ ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ರೈತರ ಜಮೀನುಗಳನ್ನು ಉಳಿಸಬೇಕು ಹಾಗೂ ಅಕ್ರಮ ಮಣ್ಣು ಸಾಗಾಟವನ್ನು ತಡೆಯಬೇಕು ಎಂಬುದು ರೈತರ ಮನವಿ