ನಾಯಕನಹಟ್ಟಿ:: ಸಮೀಪದ ಎನ್ ಗೌರೀಪುರದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ವೀರಗಾಸೆ ನಂದಿಕೋಲು ತಮಟೆ ವಾದ್ಯಗಳೊಂದಿಗೆ ಎನ್ ಗೌರೀಪುರ ಗ್ರಾಮದ ಆರಾಧ್ಯ ದೇವರು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ರಥೋತ್ಸವಕ್ಕೆ ಭಾಗಿಯಾಗಿದ್ದರು
ಇನ್ನೂ ರಥೋತ್ಸವಕ್ಕೆ ಶ್ರೀ ಉಮಾಪತಿ ಮತ್ತು ಸಹೋದರರು ಶ್ರೀ ಜಯಲಕ್ಷ್ಮಿ ಬೋರ್ವೆಲ್ಸ್ ನಾಯಕನಹಟ್ಟಿ ರವರಮನೆಯಿಂದ ಬಲಿ ಅನ್ನ ತರಲಾಯಿತು ಹಾಗೂ ಕಾಸು ಮೀಸಲು ಮೊಸರು ಕುಂಭ ಜಿನಿಗೆಹಾಲು ತಂದು ಶ್ರೀ ಉಮಾಮಹೇಶ್ವರ ಸ್ವಾಮಿ ರಥಕ್ಕೆ ಎಡೆ ಹಾಕಲಾಯಿತು
ಶ್ರೀ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಪಾದಗಟ್ಟಿಯವರಿಗೆ ಮೆರವಣಿಗೆ ನಡೆಯಿತು.
ರಥೋತ್ಸವಕ್ಕೆ ಮೊದಲು ಮುಕ್ತಿ ಬಾವುಟ ಹಾರಾಜು ಪ್ರಕ್ರಿಯೆ ನಡೆಯಿತು. ಮುಕ್ತಿ ಬಾವುಟವನ್ನು ಗ್ರಾಮದ ಶ್ರೀ ಉಮಾಪತಿ ಮತ್ತು ಸಹೋದರರು ಶ್ರೀ ಜಯಲಕ್ಷ್ಮಿ ಬೋರ್ವೆಲ್ಸ್ ಇವರು ಪಡೆದುಕೊಂಡರು
ನಂತರ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಪ
ಇದೆ ವೇಳೆ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಬಿ ಎಂ ತಿಪ್ಪೇಸ್ವಾಮಿ ಮಾತನಾಡಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ.ಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ, ಸದಸ್ಯ ತಿಪ್ಪಮ್ಮ ಡಿ ತಿಪ್ಪೇಸ್ವಾಮಿ ಎನ್ ಗೌರಿಪುರ, ಎಂ ಓಬಳೇಶಪ್ಪ, ಮಂಜಣ್ಣ,ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು
ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಬಿ ಎಂ ತಿಪ್ಪೇಸ್ವಾಮಿ, ಎಂ. ಭೋಗೇಶ್ ಕನ್ವೀನರ್ ,ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿ ಹಾಗೂ ಎನ್ ಗೌರೀಪುರ ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು