ಸಂಭ್ರಮ ಸಡಗರದಿಂದ ಜರುಗಿದ ಸಾಣಿಕೆರೆ ಗ್ರಾಮದ ಕಾರ್ತಿಕೋತ್ಸವ

ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಕಾರ್ತಿಕೋತ್ಸವ ಹಬ್ಬವನ್ನು ಗ್ರಾಮಸ್ಥರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಗ್ರಾಮ ದೇವತೆಯಾದ ಕರಿಯಮ್ಮ ದೇವಿ, ಆಂಜನೇಯ ಸ್ವಾಮಿ, ದುರ್ಗಮ್ಮ ದೇವಿ, ಈಶ್ವರನ ದೇವಸ್ಥಾನ, ಹೀಗೆ ಗ್ರಾಮದ ಎಲ್ಲಾ ದೇವಸ್ಥಾನಗಳಿಗೂ ಕೇಸರಿ ಬಣ್ಣದ ಬಾವುಟಗಳು, ವಿವಿಧ ರೀತಿಯ ಹೂವುಗಳು, ವಿವಿಧ ಬಗೆಯ ವಿದ್ಯುತ್ ದೀಪಗಳಿಂದ, ಅಲಂಕರಿಸಿ ದೇವಸ್ಥಾನದ ಮುಂಭಾಗದಲ್ಲಿ ಎಣ್ಣೆ ದೀಪಗಳನ್ನು ಹಚ್ಚುವ ಮೂಲಕ ಗ್ರಾಮದಲ್ಲಿ ಕಾರ್ತಿಕೋತ್ಸವ ಹಬ್ಬವನ್ನು ಆಚರಿಸಿದರು.

ಗ್ರಾಮದ ಕಾರ್ತಿಕೋತ್ಸವ ಹಬ್ಬದ ವಿಶೇಷವೆಂದರೆ ಶಕ್ತಿ ದೇವತೆಯಾದ ಕರಿಯಮ್ಮ ದೇವಿಯ, ಹೂವಿನ ಪಲ್ಲಕ್ಕಿ ಹಾಗೂ ಊರನ್ನು ಕಾಯುವ ಆಂಜನೇಯ ಸ್ವಾಮಿಯ ಹೂವಿನ ಪಲ್ಲಕ್ಕಿ ,ಉತ್ಸವವನ್ನು ಗ್ರಾಮದ ಯುವಕರು ಮೂರ್ನಾಲ್ಕು ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ರೀತಿಯಲ್ಲಿ ಕಾರ್ತಿಕ ಹಬ್ಬವನ್ನು ಆಚರಿಸಿಕೊಳ್ಳುತ್ತಾ ಬರುತ್ತಿದ್ದೇವೆ ಎಂದು ಗ್ರಾಮದ ಎಸ್.ಎಸ್.ಸುನಿಲ್ ತಿಳಿಸಿದರು.

ಗ್ರಾಮದ ಮುಖ್ಯಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಕರಿಯಮ್ಮ ದೇವಿ ಆಂಜನೇಯ ಸ್ವಾಮಿಯ ಮೆರವಣಿಗೆ ಸಾಗುತ್ತಿರುವಾಗ. ಗ್ರಾಮ ದೇವರುಗಳ ದರ್ಶನವನ್ನು ಪಡೆಯಲು, ಗ್ರಾಮದ ಭಕ್ತರೆಲ್ಲರು ಎಲ್ಲರೂ ಸಹ ಪೂಜಾ ಸಾಮಗ್ರಿಗಳೊಂದಿಗೆ ಬಂದು ದೇವರ ದರ್ಶನವನ್ನು ಪಡೆದರು.

ಗ್ರಾಮದಲ್ಲಿ ಹಲವ ವರ್ಷಗಳಿಂದ ಕಾರ್ತಿಕೋತ್ಸವ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ, ಆದರೆ ಮೂರ್ನಾಲ್ಕು ವರ್ಷದಿಂದ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿಸುತ್ತಿದ್ದು ಗ್ರಾಮದ ಎಲ್ಲಾ ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸುತ್ತಾರೆ ಎಂದು ಗ್ರಾಮದ ರಘುನಾಥ್ ತಿಳಿಸಿದರು.

About The Author

Namma Challakere Local News
error: Content is protected !!