ಚಳ್ಳಕೆರೆ : ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮಹಾದಾಸೆ ಹೊಂದಿದೆವೆ, ಅದರಂತೆ ಕಳೆದ ಹತ್ತು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ರಂಗವ್ವನಹಳ್ಳಿ, ಕರೀಕೆರೆ, ಬೊಮ್ಮಸಮುದ್ರ ಮೀರಾಸಾಬಿಹಳ್ಳಿ ಮಾರ್ಗದ ಸಾರಿಗೆ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಟಿ.ರಘುಮೂರ್ತಿ ಕೊವಿಡ್ ನಂತರ ಚೇತರಿಸಿಕೊಂಡ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸೌಲಭ್ಯ ಹೊದಗಿಸುವ ನಿಟ್ಟಿನಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ ಇನ್ನೂ ತಾಲೂಕಿನ ಕೇಂದ್ರ ಸ್ಥಾನದಿಂದ ಬೆಳಗೆರೆ, ಕಲಮರಹಳ್ಳಿ, ಸಾಣಿಕೆರೆ, ಹುಲಿಕುಂಟೆ ಮಾರ್ಗಕ್ಕೂ ಇಂದು ಚಾಲನೆ ಸಿಕ್ಕಿದೆ ಮುಂದಿನ ವಾರ ದೇವರಮರಿಕುಂಟೆ ಮಾರ್ಗಕಕ್ಕೂ ಬಸ್ ಕಲ್ಪಿಸುವ ವ್ಯವಸ್ಥೆ ಆಗುತ್ತಿದೆ ಎಂದರು.
ಈದೇ ಸಂಧರ್ಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಾದ ಪ್ರಭು, ಇತರ ಸಿಬ್ಬಂದಿಗಳು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಕೃಷ್ಣಮೂರ್ತಿ, ಕೆಡಿಪಿ ನಾಮ ನಿದೇರ್ಶನ ಸದಸ್ಯ ರಂಗಸ್ವಾಮಿ, ಆರ್.ಪ್ರಸನ್ನ ಕುಮಾರ್, ಚೇತನ್ ಕುಮಾರ್(ಕುಮ್ಮಿ), ಶಶಿಧರ್, ಮಂಜುನಾಥ್ ಇತರರ ಸಿಬ್ಬಂದಿ ಶಾಲಾ ವಿದ್ಯಾರ್ಥಿಗಳು ಇದ್ದರು.
ಇನ್ನೂ ಚಳ್ಳಕೆರೆ ಟಿವಿ ವರದಿ ಪ್ರಸಾರದ ಹಿನ್ನೆಲೆಯಲ್ಲಿ ಶಾಸಕ ಟಿ.ರಘುಮೂರ್ತಿ ರವರು ವಿಶೇಷವಾಗಿ ಪ್ರಸಾರವಾದ ಸುದ್ದಿಗಳನ್ನು ಸಿಸಿಟಿವಿ ಕಣ್ಗಾವಲು, ಸ್ವಚ್ಚತೆ, ಕಳ್ಳತನ ಪ್ರಕರಣಗಳು, ಸಮಯಕ್ಕೆ ಸರಿಯಾದ ಸಾರಿಗೆ, ಇತರೆ ಅಂಶಗಳನ್ನು ಒಂದೊAದಾಗಿ ಸಮಸ್ಯೆ ಬಗೆಹರಿಸುವಂತೆ ಸಾರಿಗೆ ವ್ಯವಸ್ಥಾಪಕ ಪ್ರಭುರವರಿಗೆ ಎಚ್ಚರಿಕೆ ನೀಡಿದರು.

About The Author

Namma Challakere Local News
error: Content is protected !!