ಚಿತ್ರದುರ್ಗ: ವಿಶೇಷಚೇತನರು ಮುಖ್ಯವಾಗಿ ತಮ್ಮ ಸಾಮಥ್ಯ ಮೇಲೆ ನಂಬಿಕೆ ಇಡಬೇಕು. ತಮ್ಮ ಸಾಮಥ್ಯಕ್ಕನುಗುಣವಾಗಿ ಪ್ರಯತ್ನ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಟಿ. ಎಂ. ರಘುಮೂರ್ತಿ ಸಲಹೆ ನೀಡಿದರು.
ಚಿತ್ರದುರ್ಗ ನಗರದ ತರಾಸು ರಂಗಮAದಿರದಲ್ಲಿ ಲೋಹಿಸ್ ಬೈಲ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಿಶೇಷ ಚೇತನರ ಸಂಘ ಸಂಸ್ಥೆ ಒಕ್ಕೂಟಗಳು, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ, ಎಂಆರ್ ಡಬ್ಲ್ಯೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರು ತಮ್ಮ ಹಕ್ಕುಗಳು, ಅವಕಾಶಗಳನ್ನು ಅರ್ಥಮಾಡಿಕೊಂಡು, ಬಳಸಿಕೊಂಡು ತಾವು ಸಾಮಾನ್ಯರಂತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ವಿಕಲಚೇತನರ ದಿನ ಆಚರಣೆ ಮಾಡಲಾಗುತ್ತಿದೆ.
ಸಮಾಜದಲ್ಲಿ ಎಲ್ಲಾರಂತೆ ಬದುಕು ಅವಕಾಶ ಇದ್ದು ಸರ್ಕಾರದ ಸೌಲಭ್ಯ ಪಡೆದುಕೊಂಡು ತಮ್ಮ ಬದುಕು ಕಟ್ಟಿಕೊಳ್ಳಬೇಕು. ವಿಕಲಚೇತನರ ಕಲ್ಯಾಣಕ್ಕಾಗಿ ಪ್ರತ್ಯೇಕವಾಗಿ ಇಲಾಖೆಯನ್ನು ಸ್ಥಾಪಿಸಲಾಗಿದ್ದು, ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ತಾವುಗಳು ಉಚಿತ ಬಸ್ ಪಾಸ್ ನೀಡಲು ಮನವಿ ಮಾಡಿದ್ದಿರ ಇದನ್ನು ಸರ್ಕಾರದ ಜೊತೆ ಚರ್ಚೆ ನಡೆಸಲಾಗುತ್ತದೆ. ನನ್ನ ಕ್ಷೇತ್ರದಲ್ಲಿ ಕಳೆದ ವರ್ಷ ವಿಕಲಚೇತನರಿಗೆ 100 ಕ್ಕೂ ಹೆಚ್ಚು ವಿಕಲಚೇತನ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ ಮಾಡಲಾಗಿದ್ದು ಅವುಗಳನ್ನು ಪಡೆದುಕೊಂಡು ಅನೇಕರು ಬದುಕು ಕಂಡುಕೊAಡಿದ್ದು ಮುಂದಿನ ದಿನಗಳಲ್ಲಿ ಸಹ ಸರ್ಕಾದ ಜೊತೆ ನಿಮ್ಮ ಸಮಸ್ಯೆಗಳನ್ನು ತಂದು ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರಭಾರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಂ.ವಿ.ವೀಣಾ ಮಾತನಾಡಿ, ಸಾಮಾನ್ಯರಂತೆ ಜೀವಿಸಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಅಡೆತಡೆರಹಿತ ಸೌಲಭ್ಯ, ನೆರವು ನೀಡುವುದು ಸರ್ಕಾರದ ಹಾಗೂ ಸಮುದಾಯದ ಜವಾಬ್ದಾರಿ ಎಂದರು.
ವಿಕಲಚೇತನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳನ್ನು ಒದಗಿಸಿ ಎಲ್ಲಾ ವಿಕಲಚೇತನರು ಮುಖ್ಯವಾಹಿನಿಗೆ ಬರುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ವಿಕಲಚೇತನರು ವಿವಿಧ ಸೌಲಭ್ಯಗಳನ್ನು ಪಡೆದು ತಮ್ಮ ಜೀವನ ರೂಪಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಲ್ಲಿಕಾರ್ಜುನ್, ಸಮಾಜ ಸೇವಕರಾದ ಸುರೇಶ್ ಬಾಬು, ಮುಖಂಡರಾದ ರಂಗಪ್ಪ ದಾಸರ್, ಪಾಪಯ್ಯ, ಆನಂದ್, ಜಾಕೀರ್ ಹುಸೇನ್, ಮುಜೀಬ್ ಮತ್ತಿತರರು ಇದ್ದರು.

Namma Challakere Local News
error: Content is protected !!