ಚಳ್ಳಕೆರೆ : ರಸ್ತೆಅಪಘಾತವೋ, ಕೊಲೆಯೋ ಬೈಕ್ ಸಾವರ ಸ್ಥಳದಲ್ಲೇ ಮೃತಪಟ್ಟ ಘಟನೆ ತಳಕು ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಚಳ್ಳಕೆರೆ ತಾಲೂಕಿನ ಹೊನ್ನೂರು ಗ್ರಾಮದ ತ್ಯಾಗರಾಜ್ (18) ಮೃತ ವ್ಯಕ್ತಿ, ಹೊಸಳ್ಳಿಕುಂಟೆ ಗ್ರಾಮದ ನಡುವೆ ರಸ್ತೆ ಮೇಲೆ ಅಫಘಾತದವಾದ ದೃಶ್ಯದ ರೀತಿಯಲ್ಲಿ ಮೃತ ವ್ಯಕ್ತಿ ಸಾವನಪ್ಪಿದ್ದು ನಿಜಕ್ಕೂ ಮೃತರ ಪೋಷಕರನ್ನು ಚಿಂತೆಗೀಡು ಮಾಡಿದೆ.
ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಎಂಬುದು ಮೆಲ್ನೋಟಕ್ಕೆ ಕಂಡರೆ, ಮೃತನ ಮಾವ ವೆಂಕಟೇಶ್ ಹೇಳುವುದು, ನನ್ನ ಅಳಿಯನ ಜತೆ ಇಬ್ಬರು ಹುಡುಗರಿದ್ದರು ಹಾಗೂ ತಲೆ ಬುರುಡೆ ಓಪನ್ ಆಗಿರುವುದರಿಂದ ಕೊಲೆ ಶಂಕೆ ವ್ಯಕ್ತ ಪಡಿಸಿದ್ದಾರೆ.
ಮೃತ ಯುವಕ ಚಳ್ಳಕೆರೆ ನಗರದ ಸರಕಾರಿ ಪ್ರಥಮ ದರ್ಜೆ ಕಾಲೀಜಿನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಪೋಲಿಸ್ ಇಲಾಖೆ ಸೂಕ್ತ ತನಿಖೆಸಿ ಕೊಲೆಯೋ ಅಥವಾ ಅಪರಿಚಿತ ವಾಹನ ಅಪಘಾತವೇ ಎಂಬುದು ತನಿಖೆಯ ನಂತರ ಬಯಲಾಗ ಬೇಕಿದೆ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಳಕು ವೃತ್ತ ನಿರೀಕ್ಷಕ ಕೆ.ಸಮೀವುಲ್ಲ ಹಾಗೂ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.