ಚಳ್ಳಕೆರೆ ನಗರದ ಶಾಸಕರ ಭವನಕ್ಕೆ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ಬೇಟಿ
ಚಳ್ಳಕೆರೆ : ನಗರದ ಶಾಸಕರ ಭನದಲ್ಲಿ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಟಿ.ಶ್ರೀನಿವಾಸ್ ರವರು ಆಗಮಿಸಿದ ಹಿನ್ನಲೆಯಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಶಾಸಕರ ಭವನದಲ್ಲಿ ನಡೆದ ಪದವೀಧರ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಶ್ರೀಯುತ ಡಿ.ಟಿ.ಶ್ರೀನಿವಾಸ್ ರವರು ಚುನಾವಣೆಯ ಸಭೆಯನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ನಗರಸಭೆ ಸದಸ್ಯರಾದ ರಮೇಶ್ ಗೌಡ, ಪ್ರಕಾಶ್, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ನಕುಮಾರ್, ಕ.ಸಾ.ಪ.ಅಧ್ಯಕ್ಷರಾದ ಜಿ.ಟಿ.ವೀರಭದ್ರಸ್ವಾಮಿ, ಸಿ.ಟಿ.ವೀರೇಶ್, ಹಿರಿಯ ಮುಖಂಡರಾದ ಪಿ.ತಿಪ್ಪೇಸ್ವಾಮಿ, ಸೈಯದ್, ಅನ್ವರ್ ಮಾಸ್ಟರ್, ಗೋವಿಂದರಾಜ್, ಮುಖಂಡರಾದ ಕೃಷ್ಣಮೂರ್ತಿ, ಪ್ರಹ್ಲಾದ, ದಳವಾಯಿ ಮೂರ್ತಿ, ಸೂರನಾಯಕ, ಚೇತನ್ ಕುಮಾರ್, ಬೋರಣ್ಣ, ಸಿ.ಟಿ.ಶ್ರೀನಿವಾಸ್, ಬೋರಣ್ಣ, ವೀರಭದ್ರ, ನಟರಾಜ್, ಗುರುಮೂರ್ತಿ, ಅಪ್ಪಣ್ಣ, ಮುಖಂಡರು, ಕಾರ್ಯಕರ್ತರು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.