ನಾಯಕನಹಟ್ಟಿ::ತೀರ್ಪುಗಾರು ಯಾವುದೇ ವ್ಯಕ್ತಿ ಒಬ್ಬನ ಪರವಾಗಿ ತಪ್ಪು ತೀರ್ಪು ನೀಡುವುದರ ಬದಲಾಗಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.

ಅವರು ಗುರುವಾರ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಡಿಹಳ್ಳಿ ಡಿ ಕೆ ಕ್ರೀಡಾಂಗಣದಲ್ಲಿ ಭಗತ್ ಕ್ರಿಕೆಟ್ ವತಿಯಿಂದ ಟೆನ್ನಿಸ್ ಬಾಲ್ ಟೂರ್ನಮೆಂಟ್ ಮತ್ತು ಜಮ್ಮು ಕಾಶ್ಮೀರದ ಭಯೋತ್ಪಾದಕರ ಗುಂಡಿನ ಕಾಳಗದಲ್ಲಿ ಮರಣವನ್ನಪ್ಪಿದ ವೀರ ಕನ್ನಡಿಗ ಯೋಧ ಕ್ಯಾಪ್ಟನ್ ಪ್ರಾಂಜಲ್ ಇವರ ಸವಿ ನೆನಪಿಗಾಗಿ ಅಬ್ಬೇನಹಳ್ಳಿ ಪಂಚಾಯತಿ ಲೀಗ್ ಎಪಿಎಲ್ ಸೀಸನ್ 1 ಕ್ರೀಡಾಕೂಟಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ್ದಾರೆ.
ಕ್ರೀಡಾಪಟುಗಳು ತಾಳ್ಮೆ ಹಾಗೂ ಸಂಯಮದಿಂದ ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣ ಮಾಡಿದರೆ ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯ.
ಜೀವನದಲ್ಲಿ ಪ್ರತಿಯೊಬ್ಬರಿಗೂ ಕ್ರೀಡೆ ಚಟುವಟಿಕೆಗಳು ಅಮೂಲ್ಯವಾದದ್ದು ಯುವ ಕ್ರೀಡಾಪಟುಗಳು ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಹಾಗೂ ಮನಸ್ಸು ಸದೃಢವಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಬಿ ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ ಶಂಕರಸ್ವಾಮಿ, ಓ ವಿ ಸಣ್ಣೋಬಯ್ಯ, ಪಾಟೀಲ್ ಗುಂಡಪ್ಪ,ಟಿ ಶೇಖರ ಗೌಡ , ಪಡ್ಲು ಬೋರಯ್ಯ, ಪಿ ಟಿ ನಾಗೇಶ್, ಶ್ರೀಮತಿ ಜೆ ಪಿ ಪ್ರಿಯಾಂಕ ಎಸ್ ಪಿ ಪಾಲಯ್ಯ, ಅಬ್ಬೇನಹಳ್ಳಿ ಯುವ ಮುಖಂಡ ಶಿವಪ್ರಕಾಶ್, ಅಬ್ಬೇನಹಳ್ಳಿಯ ಸಿಆರ್‌ಪಿ ಜಿ ಪಾಲಯ್ಯ, ಕೊರಡಿಹಳ್ಳಿ ಹೊಸೂರು ಬಡಾವಣೆಯ ಮುಖ್ಯ ಶಿಕ್ಷಕ ಎನ್ ಮಹಾಂತೇಶ್, ಯುವ ಮುಖಂಡ ಪಿ. ಸುರೇಂದ್ರಪ್ಪ ಕಾಂಗ್ರೆಸ್ ಮುಖಂಡರು, ಗುಂತಕೋಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ವಾಸಣ್ಣ,ವಿಷ್ಣು, ಸೇರಿದಂತೆ ಕ್ರೀಡಾಪಟುಗಳು ಇದ್ದರು.

About The Author

Namma Challakere Local News
error: Content is protected !!