ಪರಶುರಾಮಪುರ
ಪರಶುರಾಮಪುರ ಹೋಬಳಿಯಾದ್ಯಂತ ಶ್ರಧ್ದಾಭಕ್ತಿಯಿಂದ ಕನಕದಾಸರ ಜಯಂತ್ಯುತ್ಸವ
ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಟಿಎನ್‌ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಸಮಿತಿಯ ಅಧ್ಯಕ್ಷ ಬಸವರಾಜು ತಿಳಿಸಿದರು
ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನಕ ದಾಸರ ಜಯಂತ್ಯುತ್ಸವದಲ್ಲಿ ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು
ದಾಸರ ಕೀರ್ತನೆಗಳಲ್ಲಿ ಸಮಾಜಿಕ, ನೈತಿಕ ಹಾಗೂ ಕೌಟುಂಬಿಕ ಮೌಲ್ಯಗಳಿವೆ ಕನಕದಾಸರ ಕೀರ್ತನೆಗಳನ್ನು ಓದಿ ಮನನ ಮಾಡಿಕೊಳ್ಳಬೇಕು ಎಂದರು
ಕನಕದಾಸರೂ ಕೂಡ ನಿಸ್ವಾರ್ಥ ಜೀವಿತವನ್ನೇ ತನ್ನ ಗುರಿಯಾಗಿಸಿಕೊಂಡಿದ್ದರು ಅವರು ಎಂದಿಗೂ ಐಹಿಕ ಸುಖಗಳಿಗೆ ದಾಸರಾಗಲಿಲ್ಲ ಎಂದರು
ಮುಖ್ಯಶಿಕ್ಷಕ ಎ ಚನ್ನಕೇಶವ ಮಾತನಾಡಿ ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ದಾರ್ಶನಿಕ ಆದರ್ಶಗಳನ್ನು ತಿಳಿಸಿ ಅವುಗಳನ್ನು ನಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳಲು ತಿಳಿ ಹೇಳಬೇಕು ಎಂದರು
ಇದೇ ವೇಳೆ ಪರಶುರಾಮಪುರ, ಜಾಜೂರು, ಟಿಎನ್‌ಕೋಟೆ, ಪಗಡಲಬಂಡೆ, ಸಿಎನ್‌ಹಳ್ಳಿ, ಚೌಳೂರು, ಎಸ್‌ದುರ್ಗ, ದೊಡ್ಡಚೆಲ್ಲೂರು, ಬೆಳಗೆರೆ, ದೇವರಮರಿಕುಂಟೆ, ಗ್ರಾಪಂ ಕೇಂದ್ರಗಳೂ ಸೇರಿದಂತೆ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕನಕದಾಸರ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು ಪಿ ಮಹದೇವಪುರ ಎಸ್‌ದುರ್ಗ, ಪಿ ಗೌರೀಪುರ, ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ಕರ‍್ಲಕುಂಟೆ ಚಿಕ್ಕಚೆಲ್ಲೂರು, ಗೋವರ್ಧನಗಿರಿ ಜಾಜೂರು ಪಗಡಲಬಂಡೆ ಮತ್ತಿತರೆ ಗ್ರಾಮಗಳಲ್ಲಿ ಕನಕದಾಸರ ಕುರಿತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು ಸಂದರ್ಭದಲ್ಲಿ ಶಾಲಾ ಸಮಿತಿಯ ಅಧ್ಯಕ್ಷ ಬಸವರಾಜು, ಮುಖ್ಯಶಿಕ್ಷಕ ಎ ಚನ್ನಕೇಶವ, ಶಿಕ್ಷಕರಾದ ವಸಂತಕುಮಾರ, ಭರತ್, ಪ್ರಸನ್ನ ಪ್ರಶಿಶಿಕ್ಷಕರಾದ ಮಮತಾ, ದೀಪಿಕಾ ಶಾಲಾ ಸಮಿತಿಯವರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು
ಪೋಟೋ (ಪಿಆರ್‌ಪುರ ದಿನ 30 )
ಪರಶುರಾಮಪುರ ಸಮೀಪದ ಟಿಎನ್‌ಕೋಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನಕ ದಾಸರ ಜಯಂತ್ಯುತ್ಸವದಲ್ಲಿ ಕನಕರ ಭಾವಚಿತ್ರಕ್ಕೆ ಶಾಲಾ ಸಮಿತಿಯ ಅಧ್ಯಕ್ಷ ಬಸವರಾಜು, ಚನ್ನಕೇಶವ, ವಸಂತಕುಮಾರ ಪುಷ್ಪಾರ್ಚನೆ ಸಲ್ಲಿಸಿದರು

About The Author

Namma Challakere Local News
error: Content is protected !!