ಶಾಸಕರ ಭವನದಲ್ಲಿ ನೆಹರು ಜಯಂತಿ..ಹೇಗಾಯಿತು..?

ಚಳ್ಳಕೆರೆ : ನಾಗರಿಕರ ಸಮಾನ ಹಕ್ಕುಗಳ ಪರಿಕಲ್ಪನೆಯು ಎಲ್ಲಾ ಸಾಮಾಜಿಕ ವಿಭಾಗಗಳನ್ನು ಅತಿಕ್ರಮಿಸುವ ಪ್ರಬಲ ಭಾರತೀಯ ರಾಷ್ಟ್ರದ ಸ್ಥಾಪನೆಗೆ ನೆಹರು ಬದ್ಧರಾಗಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಹೇಳಿದರು.
ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪಂಡಿತ್ ಜವಾರಲಾಲ್ ನೆಹರುರವರ ಜನ್ಮದಿನಾಚರನೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮಾತನಾಡಿದರು, ಕೇವಲ ರಾಜಾಕೀಯದಲ್ಲಿ ಅಲ್ಲದೆ ಮಕ್ಕಳ ಹಿತ ರಕ್ಷಣೆಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಪೋಷಣೆಯ ವಾತಾವರಣವನ್ನು ಒದಗಿಸುವ ಮಹತ್ವವನ್ನು ನೆಹರೂ ಒತ್ತಿ ಹೇಳಿದ್ದಾರೆ. ಮಕ್ಕಳು ಜವಾಬ್ದಾರಿಯುತ ಮತ್ತು ಸಮರ್ಥ ನಾಗರಿಕರಾಗಿ ಬೆಳೆಯಲು ಸಮಾಜ ಪ್ರಮುಖವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಹ ಹೇಳಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಕೆಡಿಪಿಯ ನೂತನ ಸದಸ್ಯ ಓ.ರಂಗಸ್ವಾಮಿ ಮಾತನಾಡಿ, ಪ್ರತಿವರ್ಷವು ಸಹ ನವೆಂಬರ್ 14ರಂದು ಮಕ್ಕಳ ದಿನಾಚರಣೆ ದೇಶದಾದ್ಯಂತ ನಡೆಯುತ್ತದೆ. ಈ ದಿನದ ಮಹತ್ವವೇನು ಎಂಬುದನ್ನು ತಿಳಿಯುವುದು ಪ್ರತಿ ವಿದ್ಯಾರ್ಥಿಗಳ ಕರ್ತವ್ಯ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆಯನ್ನು ಶಾಲೆ, ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಈ ದಿನದಂದು ಮಕ್ಕಳಿಗೆ ಕೆಲವು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಅದರಂತೆ ‘ಆಬ್ಜೆಕ್ಟಿವ್ ರೆಸಲ್ಯೂಷನ್’ನಲ್ಲಿ ನೆಹರೂ ಅವರ ಆದರ್ಶಗಳು , ಕಾರ್ಯನಿರತ ಸಂವಿಧಾನವನ್ನು ರೂಪಿಸಲು ಸಂವಿಧಾನ ಸಭೆಯನ್ನು ಮುನ್ನಡೆಸಿದವು ಎಂದರು.
ಈದೇ ಸಂಧರ್ಭದಲ್ಲಿ ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ.ಶಶಿಧರ್, ಕೆಡಿಪಿ ಸದಸ್ಯ ಓ.ರಂಗಸ್ವಾಮಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಎಚ್ಎಸ್ ಸೈಯದ್. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಟಿ ತಿಪ್ಪೇಸ್ವಾಮಿ. ಅನ್ವರ್ ಮಾಸ್ಟರ್, ಸೇವಾದಳದ ರಾಜ್ಯ ಕಾರ್ಯದರ್ಶಿ ಸೈಪುಲ್, ತಾಲೂಕು ಅಧ್ಯಕ್ಷ ನನ್ನಿವಾಳ ಸಿ.ಆರ್.ತಿಪ್ಪೆಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗಿರಿಯಪ್ಪ. ಪಾಪಣ್ಣ, ಶಿವಸ್ವಾಮಿ, ಕೊನಪ್ಪ ವೀರಭದ್ರಿ, ಬಷೀರ್, ಮೈಲಾರಪ್ಪ ನಾಗರಾಜು ಜಾಫರ್ ಇತರರು ಇದ್ದರು.

Namma Challakere Local News

You missed

error: Content is protected !!