ನಾಯಕನಹಟ್ಟಿ:: ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಜಾಗನೂರಹಟ್ಟಿ ಗ್ರಾಮದ ಒಂದನೇ ವಾರ್ಡಿನಲ್ಲಿ ಕುಡಿಯುವ ನೀರಿನಲ್ಲಿ ಗೊದ್ದ ಕಾಣಿಸಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯದ ವಾತಾವರಣದಲ್ಲಿ ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಅಧ್ಯಕ್ಷ ಪಿ ಮುತ್ತಯ್ಯ ಹೇಳಿದ್ದಾರೆ.
ಅವರು ಸೋಮವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರ ಹಟ್ಟಿ ಗ್ರಾಮದ ಒಂದನೇ ವಾರ್ಡಿನಲ್ಲಿ ಕುಡಿಯುವ ನೀರಿನಲ್ಲಿ ಗೊದ್ದಗಳು ಕಾಣಿಸಿಕೊಳ್ಳುತ್ತಿರುವುದನ್ನು ನೋಡಿ ಮಾತನಾಡಿದ್ದಾರೆ ನಮ್ಮ ಗ್ರಾಮದಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನಲ್ಲಿ ಗೊದ್ದ ಹುಳಗಳು ಕೀಟನಾಶಗಳು ನೀರಿನಲ್ಲಿ ಬರುವುದು ತುಂಬಾ ನೋವಿನ ಸಂಗತಿ ಸಾಕಷ್ಟು ಬಾರಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಮನು ಮಾಡಿದರೂ ಸಹ ಕ್ಯಾರಿ ಅನ್ನುತ್ತಿಲ್ಲ ಮಾನ್ಯ ತಾಶಿಲ್ದಾರ್ ಅವರು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಕರವೇ ಹೋಬಳಿ ಅಧ್ಯಕ್ಷ ಪಿ. ಮುತ್ತಯ್ಯ, ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಮ್ಮ, ಸುರಲಿಂಗಯ್ಯ, ಚನ್ನಮ್ಮ, ಅಭಿ, ರಾಧಮ್ಮ, ಚಂದ್ರಶೇಖರ್, ಸೇರಿದಂತೆ ಇನ್ನೂ ಮುಂತಾದವರು ಇದ್ದರು