ಚಳ್ಳಕೆರೆ : ಬಯಲು ಸೀಮೆಯಲ್ಲಿ ಬರಗಾಲ ಚಾಯೆ ಆವರಿಸಿ ಮನುಷ್ಯ ಸಂಕುಲ ಹಾಗೂ ಪ್ರಾಣಿ ಸಂಕುಲ ತುತ್ತು ಅನ್ನಕ್ಕೂ ಪರದಾಡುವ ಕಾಲ ಸನಿಹವಾಗುತ್ತಿದೆ.
ಇತ್ತ ಆಳುವ ಸರಕಾರಗಳು ಮಾತ್ರ ಕೆಲವು ಮಾನದಂಡಗಳ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿ ಮೌನ ವಹಿಸಿರುವುದಷ್ಟೆ ಸರಿಯೇ ದುಡಿದ ಹಣವು ಪಾವತಿಸದರೆ ಕಳೆದ ಎರಡು ತಿಂಗಳಿAದ ನರೇಗಾದಲ್ಲಿ ಕೂಲಿ ಮಾಡಿದ ಬಡ ಕೂಲಿ ಕಾರ್ಮಿಕರ ಪಾಡು ಚಿಂತಜನಕವಾಗಿದೆ.
ಹೌದು ಚಳ್ಳಕೆರೆ ಎಂದರೆ ತಟ್ಟನೆ ನೆನಪಾಗುವುದು ಬರಗಾಲ ಪಿಡೀತ ಪ್ರದೇಶ, ಇಲ್ಲಿನ ಒಣ ಹವೆ ರಾಜ್ಯದ ಉದ್ದಗಲಗ್ಗೂ ವ್ಯಾಪಿಸಿರುವುದು ಕಾಣಬಹುದು ಇಂತಹದೊAದು ಬರದ ನಾಡಿನಲ್ಲಿ ದುಡಿಯುವ ಕೈಗಳಿಗೆ ಕೂಲಿ ಕೊಡುವ ಮೂಲಕ ಗುಳೆ ಹೊಗುವುದನ್ನು ತಪ್ಪಿಸಲು ಪಣ ತೊಟ್ಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಇಓ.ಹೊನ್ನಯ್ಯ ಹಾಗೂ ನರೇಗಾ ಯೋಜನಾಧಿಕಾರಿ ಸಂತೋಷ್ ಕುಮಾರ್ ಪಣತೊಟ್ಟು ತಾಲೂಕಿನಲ್ಲಿ ಬರದಚಾಯೇ ಆಚರಿಸುವ ಮುನ್ನೆಯೇ ಎಚ್ಚಿತ್ತುಕೊಂಡು ದುಡಿಯುವ ಕೈಗಳಿಗೆ ಕೂಲಿ ನೀಡಿದ್ದಾರೆ.
ಸರಕಾರದ ಮಾನದಂಡದ ಪ್ರಕಾರ ಇನ್ನೂ ಹೆಚ್ಚಿನ 50 ಮಾನವ ದಿನಗಳನ್ನು ಸೃಜಿಸಬೇಕು ಎಂದು ದುಡಿಯುವ ಕೈಗಳು ಕೇಳುತ್ತಿವೆ ಇನ್ನೂ ಮಾಡಿದ ಕೆಲಸಕ್ಕೆ ಕಾಲ ಕಾಲಕ್ಕೆ ತಕ್ಕಂತೆ ಕೂಲಿ ಹಣ ನೀಡಬೇಕೆಂದು ಸರಕಾರವನ್ನು ಒಕ್ಕೂರಲು ಒತ್ತಾಯ ಮಾಡುತ್ತಿದ್ದಾರೆ.