ಚಳ್ಳಕೆರೆ : ಪ್ರಗತಿ ಪರೀಶಿಲನೆಗೆ ಬರುವಾಗ ಕೈ ಬಿಸಿಕೊಂಡು ಬಾರದೆ ಸಭೆಗೆ ತಕ್ಕ ಮಾಹಿತಿಯನ್ನು ತೆಗೆದುಕೊಂಡು ಬರಬೇಕು ನಿಮ್ಮ ಕಾರ್ಯವ್ಯಾಪ್ತಿಗೆ ನಿಮ್ಮ ಕಡತಗಳೇ ಕೈಗನ್ನಡಿಯಾಗುತ್ತವೆ ಎಂದು ತಾಪಂ.ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಪಿಡಿಓಗಳಿಗೆ ತರಾಟೆಗೆ ತೆಗೆದುಕೊಂಡರು.
ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಪಿಡಿಓಗಳಿಗೆ ಆಯೋಜಿಸಿದ್ದ ಪ್ರಗತಿ ಪರೀಶಿಲನೆ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಹೋಗದೆ ಜನರ ಸಂಪರ್ಕಕ್ಕೂ ಸಿಗದೆ ಕೆಲಸ ಮಾಡದೆ ಜನರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ, ಇಂದು ಪ್ರಗತಿ ಪರಿಶೀಲನಾ ಸಭೆ ಮಾಹಿತಿ ಇದ್ದರೂ ಪ್ರಗತಿ ವರದಿಯನ್ನು ತರದೆ ಕೈಬೀಸಿಕೊಂಡು ಬಂದಿದ್ದೀರಿ. ವರದಿ ನೀಡಿದರೆ ತಾಳೆಯಾಗುತ್ತಿಲ್ಲ ನುಣಚಿÂಕೊಳ್ಳಲು ತಪ್ಪು ಮಾಹಿತಿಯನ್ನು ನೀಡದೆ ನಿಖರವಾದ ಮಾಹಿತಿ ನೀಡ ಬೇಕು. ಕೆಲ ಪಿಡಿಒಗಳಿಂದ ಪಿಡಿಗಳಿಗೆ ಕೆಟ್ಟ ಹೆಸರು ಬರುತ್ತದೆ ಕಚೇರಿಯಲ್ಲಿ ಕೂತು ಸರಕಾರದಿಂದ ಬಂದ ಅನುದಾನದಿಂದ ಗ್ರಾಮೀಣ ಜನರಿಗೆ ಅರ್ಹ ಫಲಾನುಭವಿವಿಗಳಿಗೆ ತಲುಪಿಸುವ ಕೆಲಸ ಹಾಗಬೇಕು.
ಕಾಮಗಾರಿ ಮುಗಿಸಬೇ ಸುಖಾ ಸುಮ್ಮನೆ ಕಾಲ ಹರಣೆ ಮಾಡದೆ ನಿಮ್ಮ ಗ್ರಾಪಂ. ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗೆ ಕಾರ್ಯ ನಿಡುವ ಕಾರ್ಯವಾಗಬೇಕು, ಬಯಲು ಸೀಮೆಯಲ್ಲಿ ಬರಗಾಲ ಚಾಯೆ ಆವರಿಸಿದೆ ಇನ್ನೂ ನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ಮಾಡಿಕೊಂಡು ಪುಸ್ತಕದಲ್ಲಿಟ್ಟುಕೊಂಡರೆ ಸಾಲದು. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಮಾನವ ದಿನಗಳನ್ನು ಹೆಚ್ಚಿಸಿ ಕಾರ್ಮಿಕರನ್ನು ಗುಳೆ ಹೋಗುವುದನ್ನು ತಪ್ಪಿಸಬೇಕು.
ನರೇಗಾ ಕ್ರಿಯಾ ಯೋಜನೆ, ನರೇಗಾ ಜಾಬ್ ಕಾರ್ಡ್ಗಳಿಗೆ ಆಧಾರ್ ಸೀಡ್, 15 ನೇ ಹಣಕಾಸು ಕ್ರಿಯಾಯೋಜನೆ, ವಿಶ್ವಕರ್ಮ ಯೋಜನೆ, ಕೂಲಿನ ಮನೆ, ವಸತಿ ಯೋಜನೆ, ಬಿಕ್ಷಕರ ಕರ ಪಾವತಿ, ಡಿಸಿಬಿ ಸಂಗ್ರಹ, ಇ-ಹಾಜರಾತಿ, ವ್ಯಾಲೆಟ್ ರೀಚಾರ್ಜ್, ಸೇರಿಂದ ವಿವಿಧ ಯೋಜನೆಗಳನ್ನು ನಿವಗಧಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಬುಡ್ನಹಟ್ಟಿ ಗ್ರಾಪಂ ಪಿಡಿಒ ಮಲ್ಲೇಶಪ್ಪ ಸಭೆಗೆ ಗೈರಾಗಿದ್ದು ಯಾರ ಅನುಮತಿ ಪಡೆದು ಹೋಗಿದ್ದಾರೆ ಸಭೆಯ ಮಾಹಿತಿ ಇದ್ದರೂ ಪ್ರಗತಿ ಪರಿಶೀಲನೆಗೆ ಗೈರು ಹಾಜರಿಯಾಗಿರುವ ಬಗ್ಗೆ ನೋಟಿಸ್ ನೀಡುವಂತೆ ತಿಳಿಸುವಂತೆ ಇಓ. ಹೊನ್ನಯ್ಯ ಗರಂ ಆದರು. ಇನ್ನೂ ಇಂಜಿನಿಯಾರ್ ಟಿಸಿಯವರು ಹಿಡಿತದಲ್ಲಿ ಇಟ್ಟುಕೊಂಡಿಲ್ಲ, ಸಭೆಗೆ ಗೈರು ಹಾಜರಿಯಾಗಿರುವುದನ್ನು ಕಂಡು ತಾಲೂಕು ತಾಂತ್ರಿಕ ಆಧಿಕಾರಿ ಇಂಜಿನಯರ್‌ಗಳನ್ನು ಕಂಟೋಲ್ ಇಟ್ಟುಕೊಳ್ಳಲು ಆಗದೆ ಏನು ಕರ್ತವ್ಯ ನಿರ್ವಹಿಸುತ್ತೀರಿ ಎಂದರು.
ನಿಮಗೆ ಎರಡು ಗ್ರಾಮ ಪಂಚಾಯಿತಿ ನಿರ್ವಹಣೆ ಹಾಗುವುದಾದರೆ ಮಾಡಿ ಇಲ್ಲ ಮಾಡೊದಕ್ಕೆ ಹೋಗಬೇಡಿ, ದೊಡ್ಡ ಉಳ್ಳಾರ್ತಿ ಪಿಡಿಒ ಯೋಗೇಶ್ ಪ್ರಗತಿ ಪರಿಶೀಲಾ ಸಭೆಗೆ ಮಾಹಿತಿ ತರದೆ ಕೈಬಿಸಿ ಕೊಂಡು ಬರುವುದು ಎಷ್ಟು ಸರಿ ಇನ್ನು ದೊಡ್ಡ ಉಳ್ಳಾರ್ತಿ ಕರ್ತವ್ಯ ಆದೇಶ ಪತ್ರಿ ತೆಗೆದುಕೊಂಡು ಹೋಗಿಲ್ಲ ಗೋಪನಹಳ್ಳಿ ಗ್ರಾಪಂ ಕರ್ತವ್ಯ ಮಾಡುತ್ತಿದ್ದು ಈಗ ದೊಡ್ಡ ಉಳ್ಳಾರ್ತಿ ಬೇರೆ. ಈಗಾಗಲೆ ಗೋಪನಹಳ್ಳಿ ಗ್ರಾಪಂ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸದೆ ಮೊಬಲ್ ಸುಚ್ಚಾಪ್ ಮಾಡಿಕೊಂಡಾಗ ನನಗೆ ಕರೆ ಮಾಡುತ್ತಾರೆ ನಮಗೆ ಉತ್ತರ ನೀಡಿ ಸಾಕಾಗುತ್ತದೆ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಯಾವುದೇ ಸಮಸ್ಯ ಬರುವುದಿಲ್ಲ ಕಚೇರಿಯಿಂದ ಹಾಕಿದ ಮಾಹಿತಿಯನ್ನು ನೋಡಿ ಅದನ್ನು ಪೂರ್ಣಗೊಳಿಸಲು ಆಗದೆ ಇದ್ದರೆ ಏನು ಮಾಡುತ್ತಿರೀ ಎಂದು ಗರಂ ಆದರು.
ಇನ್ನೂ ನಿಮ್ಮಿಂದ ಮೇಲಿನ ಅಧಿಕಾರಿಗಳಿಗೆ ಉತ್ತರ ನಾವು ನೀಡಬೇಕು ನಿಗಧಿತ ಅವಧಿಯೊಳಗೆ ಎಲ್ಲಾ ಯೋಜನೆಗಳ ಮಾಹಿತಿಯನ್ನು ಪೂರ್ಣಗೊಳಿಸ ಬೇಕು ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಒಬ್ಬರಿಬ್ಬರು ಮಾಡಿದ ತಪ್ಪಿಗೆ ಎಲ್ಲರಿಗೆ ಕೆಟ್ಟ ಹೆಸರು ಮುಂದಿನ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ನರೇಗಾ ಸಹಾಯಕ ನಿರ್ಧೇಶಕ ಸಂತೋಷ್ ಕುಮಾರ್, ಪಿಆರ್ ಡಿ ಸಹಾಯಕ ನಿರ್ಧೇಶಕ ಸಂಪತ್, ದಿವಕಾರ್, ಹಾಗೂ ಎಲ್ಲಾ ನಲವತ್ತು ಗ್ರಾಮ ಪಂಚಾಯಿತಿ ಪಿಡಿಓಗಳು, ಸಿಬ್ಬಂದಿ ವರ್ಗ ಇತರರಿದ್ದರು.

About The Author

Namma Challakere Local News
error: Content is protected !!