ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಆಂದ್ರಗಡಿಭಾಗಕ್ಕೆ ಹೊಂದಿಕೊAಡ ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಅನ್ಯ ಭಾಷೆಗಳ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಗಡಿಭಾಗದ ವ್ಯಾಪಾರ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಇತರೆ ಭಾಷೆಯ ವ್ಯಾಪಾರಸ್ಥರಿಗೂ ನಮ್ಮ ಭಾಷೆಯ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.
ಪರಶುರಾಂಪುರ ಸಮೀಪ ಹಮ್ಮಿಕೊಂಡಿರುವ ಕನ್ನಡ ಜಾಗೃತಿ ಮತ್ತು ತೆಲುಗು ಭಾಷೆಯ ನಾಮಫಲಕಗಳಿಗೆ ಮಸಿ ಬಳಿದು ಮಾಲಿಕರಿಗೆ ಎಚ್ಚರಿಕೆ ನೀಡಿದರು. ಎಲ್ಲರೂ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು, ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮೇಲೆ ಕನ್ನಡದ ನಾಮಫಲಕಗಳನ್ನು ಅಳವಡಿಸಬೇಕು. ಕಳೆದ ಕೆಲ ದಿನಗಳ ಹಿಂದೆ ನಾಮಫಲಕಗಳನ್ನು ಕನ್ನಡದಲ್ಲಿ ಬರೆಯದಿದ್ದರೆ ಮಸಿ ಬಳೆಯಲಾಗುವುದು ಕೂಡಲೆ ಅನ್ಯ ಭಾಷೆ ನಾಮಫಲಕಗಳನ್ನು ತೆರವುಗೊಳಿಸದಿದ್ದರೆ ತಾಲೂಕಾಡಳಿತ, ಗ್ರಾಮಪಂಚಾಯತ್, ನಗರಸಭೆ, ಆಯಾ ವ್ಯಾಪ್ತಿಯ ಅಧಿಕಾರಿಗಳೆ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.
ಪರಶುರಾಂಪುರ ಸಮೀಪ ಇಟ್ಟಿಗೆ ಬಟ್ಟಿ ಮಾಲಿಕ ತೆಲುಗಿನಲ್ಲಿ ಹಾಕಿದ ನಾಮಫಕ ತಪ್ಪಾಗಿದೆ ಕೂಡಲೆ ಕನ್ನಡದಲ್ಲಿ ಬರೆಸಲಾಗುವುದು ಎಂದು ಕನ್ನಡ ರಕ್ಷಣಾ ಹಾಗೂ ಸಾಂಸ್ಕೃತಿವೇಧಿಕೆ ಸದಸ್ಯರ ಬಳಿ ಕ್ಷಮೆಯಾಚಿಸಿದ ಪ್ರಸಂಗ ಜರುಗಿತು.
ಪರಶುರಾಂಪುರ ತಾಲೂಕಿನ ಗಡಿಭಾಗದಲ್ಲಿ ಕನ್ನಡ ಭಾಷಾ ಜಾಗೃತಿಗೆ ಪ್ರತಿಯೊಬ್ಬ ಕನ್ನಡಿಗನ ಜಾಗೃತಿ ಇರಬೇಕು. ಅಂಗಡಿ ವಹಿವಾಟುಗಳ ಸ್ಥಾಪನೆಯಿಂದ ವಿಸ್ತಾರವಾಗಿ ಹೋಬಳಿ ಬೆಳೆಯುತ್ತಿರುವುದು ಸ್ವಾಗತಾರ್ಹ.. ಹೋಬಳಿ ವ್ಯಾಪ್ತಿಯಲ್ಲಿ ವಾಣಿಜ್ಯ ವ್ಯಾಪಾರಕ್ಕಾಗಿ ಆರಂಭವಾಗುತ್ತಿರುವ ಅಂಗಡಿ ಮತ್ತು ಸಂಸ್ಥೆಗಳ ಮೇಲೆ ತೆಲುಗು ನಾಮಫಲಕಗಳು ಸ್ಥಾಪಿಸುತ್ತಿರುವುದು ಅಪಾಯಕಾರಿಯಾಗಿದೆ.
ಅಂಗಡಿಗಳ ಹೆಸರುಗಳಿಗೆ ತೆಲುಗು ಭಾಷೆ ಬಳಸುವ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ಅಂಗಡಿ ಪರವಾನಗಿ ರದ್ದುಪಡಿಸಬೇಕು. ಗಡಿಭಾಗದಲ್ಲಿ ಭಾಷೆಯ ರಕ್ಷಣೆ ಮಾಡಿಕೊಳ್ಳುವುದು ಯಾವುದೋ ಒಂದು ಸಂಘಟನೆ ಮತ್ತು ಸಂಸ್ಥೆಯವರ ಜವಾಬ್ದಾರಿ ಎನ್ನುವ ನಿರ್ಲಕ್ಷ್ಯ ದೂರವಾಗಬೇಕು.
ಇಲ್ಲಿನ ನೆಲ, ಗಾಳಿ, ಬೆಳಕು ಬೆಳಸಿಕೊಂಡು ವ್ಯವಹಾರ ಆರಂಭಿಸುವ ಪ್ರತಿಯೊಬ್ಬರೊಗೂ ಈ ನೆಲದ ಸಂಸ್ಕೃತಿ ಮತ್ತು ಭಾಷೆಯ ಗೌರವ ಇರಬೇಕು. ಗಡಿಭಾಗದ ಶಾಲಾ-ಕಾಲೇಜುಗಳಲ್ಲೂ ತೆಲುಗು ಭಾಷೆಯ ಬಳಕೆ ದ್ವಿಗುಣವಾಗುತ್ತಿದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ವಿದ್ಯಾವಂತ ಯುವಕರಲ್ಲಿ ನಾಡಿನ ಅಭಿಮಾನ ಮತ್ತು ಭಾಷೆ ರಕ್ಷಣೆಯ ಸಂಕಲ್ಪ ಇರಬೇಕು.
ಕನ್ನಡಪರ ಕಾರ್ಯಕ್ರಮಗಳಿಗೆ ಸಹಕರಿಸುವ ಮತ್ತು ಭಾಗಿಯಾಗುವ ಮೂಲಕ ಈ ನೆಲದ ಋಣ ತೀರಿಸುವ ಮನೋಭಾವನೆ ನಮ್ಮದಾಗಿರಬೇಕು. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿರಿಯಣ್ಣ, ಮಹಾಲಿಂಗಪ್ಪ, ಪ್ರಸನ್ನರೆಡ್ಡಿ, ರಾಮದಾಸ್ ಇತರರಿದ್ದರು

Namma Challakere Local News

You missed

error: Content is protected !!