ಚಳ್ಳಕೆರೆ : ನಮ್ಮ ಭಾರತೀಯ ಪರಂಪರೆಯಲ್ಲಿ ತಂದೆ, ತಾಯಿ, ಗುರುವಿನ ಸೇವೆಗೈಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಎಸ್‌ದುರ್ಗ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಈರಯ್ಯ ಜಂಗಿನಮಠ ಹೇಳಿದರು
ಪರುಶುರಾಂಪುರ ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬಾನುವಾರ ಎಸ್‌ದುರ್ಗ ಸರ್ಕಾರಿ ಪ್ರೌಢಶಾಲಾ (1993-94 ನೇ ಎಸ್ಸೆಸ್ಸೆಲ್ಸಿಯ) ಹಳೇವಿದ್ಯಾರ್ಥಿಗಳ ಸ್ನೇಹ ಸಹ್ಯಾದ್ರಿ ಬಳಗದ ವತಿಯಿಂದ ತಮ್ಮ ಗುರುಗಳಿಗೆ ಆಯೋಜಿಸಿದ್ದ ಗುರುವಂದನೆ ಹಾಗೂ ಅಧುನಿಕ ಕಾಲಘಟ್ಟದಲ್ಲಿ ಶಿಕ್ಷಣದ ಪಾತ್ರ ಕುರಿತ ಶೈಕ್ಷಣಿಕ ಕಾರ್ಯಕ್ರಮದಲ್ಲಿ ತಮ್ಮ ಶಿಷ್ಯರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು
ಇತ್ತೀಚಿನ ದಿನ ಮಾನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗುತ್ತಿವೆ ವಿದ್ಯಾರ್ಥಿಗಳಲ್ಲಿ ಸತ್‌ಚಿಂತನೆ, ಸೇವಾ ಮನೋಭಾವ, ನೈತಿಕ ಮೌಲ್ಯಗಳನ್ನು ಬಿತ್ತುವ ಗುಣಮಟ್ಟದ ಶಿಕ್ಷಣ ಇಂದು ಲಭ್ಯವಾಗುತ್ತಿಲ್ಲ ಶಿಕ್ಷಣ ಎಂದರೆ ಮಕ್ಕಳಲ್ಲಿ ಸಂಸ್ಕಾರ, ಸೇವಾ ಮನೋಭಾವ ಗುರು ಹಿರಿಯರಿಗೆ ಗೌರವ ಭಾವನೆ ಉಂಟುಮಾಡುವುದಾಗಿದೆ ಎಂದರು
ಗುರುವAದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ದುರ್ಗ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಆರ್ ಮಂಜುಳಾ ಮಾತನಾಡಿ ಆಂಧ್ರಗಡಿಗೆ ಹೊಂದಿಕೊAಡ ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಈ ಭಾಗದ ಉಳ್ಳವರು, ಗ್ರಾಮಸ್ಥರು ಹಳೇವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ತನು ಮನ ಮತ್ತು ಧನವನ್ನು ಅರ್ಪಿಸಿ ತಮ್ಮ ಸೇವೆ ನೀಡುತ್ತಿದ್‌ದಾರೆ ಇದಕ್ಕೆ ಈ ಗುರುವಂದನೆಯೇ ಸಾಕ್ಷಿ ಎಂದರು
ಉಪನ್ಯಾಸಕ ಕ್ಯಾದಿಗುಂಟೆಗಿರಿರಾಜು ಮಾತನಾಡಿ ಎಸ್‌ದುರ್ಗ-ಕ್ಯಾದಿಗುಂಟೆ ಗ್ರಾಮಗಳ ಹಳೇವಿದ್ಯಾರ್ಥಿಗಳು ತಮಗೆ ಪಾಠ ಪ್ರವಚನ ಹೇಳಿ ಬುದ್ದಿಕಲಿಸಿದ ಗುರುಗಳಿಗೆ ಗುರುವಂದನೆ ಮತ್ತು ಇಂದಿನ ಕಾಲಘಟ್ಟದ ಯುವಕರಿಗೆ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿ ನಮ್ಮ ಗುರುಪರಂಪರೆಯನ್ನು ಮೆಲುಕು ಹಾಕುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಇದು ಎಲ್ಲರಿಗೂ ಮಾದರಿ ಕಾರ್ಯ ಎಂದರು
ಇದೇ ವೇಳೆ ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಇನಾಂದಾರ್, ಬಡಿಗೇರ, ಎಚ್ ಪಟೇಲ್, ಎಚ್‌ವಿ ವೆಂಕಟರಾಮು, ಮಂಜುಳಾ, ಗ್ರಾಮದ ಹಳೇವಿದ್ಯಾರ್ಥಿಗಳು ಮಾತನಾಡಿದರು
ಗುರುವಂದನೆ ಕಾರ್ಯಕ್ರಮದಲ್ಲಿ ಗ್ರಾಮದ ಹಳೇವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಶಾಲು, ಹಾರ, ನೆನಪಿನಕಾಣಿಕೆ, ಹಣ್ಣು ಹೂ ನೀಡಿ ಗೌರವ ಸಮರ್ಪಿಸಿದರು ನೆರೆದಿದ್ದ ಎಲ್ಲರಿಗೂ ಸಿಹಿಯೂಟ ಏರ್ಪಡಿಸಲಾಗಿತ್ತು
ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಹಾಲಿಂಗಪ್ಪ, ಇನಾಂದಾರ್, ಈರಯ್ಯ ಜಂಗಿನಮಠ, ಎಚ್ ಪಾಟೀಲ್, ಶ್ರೀನಿವಾಸ, ವೆಂಕಟರಾಜು, ಮುಖ್ಯಶಿಕ್ಷಕಿ ಆರ್ ಮಂಜುಳಾ, ಗ್ರಾಮದ ಹಳೇವಿದ್ಯಾರ್ಥಿಗಳಾದ ರಾಘವೇಂದ್ರ, ರಮೇಶ, ಶಿವಣ್ಣ, ರವಿ, ಲೋಕೇಶ, ಲಿಂಗರಾಜು, ತಿಪ್ಪೇಸ್ವಾಮಿ, ಪ್ರತಾಪ್, ಅಶ್ವತ್ಥ, ತಿಮ್ಮಾರೆಡ್ಡಿ, ಗಿರಿರಾಜು, ಮೂರ್ತಿ, ಗೌರಮ್ಮ, ನಾಗಲಕ್ಷಿö್ಮÃ, ಕಮಲಮ್ಮ, ನಗಮ್ಮ, ರಾಮಲಕ್ಷಿö್ಮÃ, ರಾಮಕೃಷ್ಣ, ಸಿದ್ದೇಶ್ವರನದುರ್ಗ-ಕ್ಯಾದಿಗುಂಟೆ ಗ್ರಾಮಗಳ 1993-94 ನೇ ಸಾಲಿನ ಹಳೇವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು ವಿದ್ಯಾರ್ಥಿಗಳಾದ ಪಲ್ಲವಿ, ಮೌನಶ್ರೀ ಪ್ರಾರ್ಥಿಸಿ ಉಪನ್ಯಾಸಕ ಗಿರಿರಾಜು ನಿರೂಪಿಸಿದರು

About The Author

Namma Challakere Local News
error: Content is protected !!