ಪರಶುರಾಮಪುರ ಸಮೀಪದ ದೊಡ್ಡಚೆಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಮವಸ್ತçಗಳನ್ನು ಶಾಲಾ ಸಮಿತಿಯ ಅಧ್ಯಕ್ಷ ರಾಘವೇಂದ್ರ, ಮಧು, ಹನುಮಂತರಾಯ, ಮುಖ್ಯಶಿಕ್ಷಕ ಡಿ ಟಿ ಹನುಮಂತರಾಯ ವಿತರಿಸಿದರು
ಸಹಿಪ್ರಾ ಶಾಲೆ ಸಮಿತಿಯ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಚತೆ ನಿಯಮಿತವಾಗಿ ಸಮವಸ್ತçಗಳನ್ನು ಧರಿಸಿಕೊಂಡು ಶಾಲೆಗೆ ಬರಬೇಕು ತಮ್ಮ ನೆರೆಹೊರೆಯ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಸರ್ಕಾರಿ ಶಾಲಾ ವಿದ್ಯಾರ್ಥೀಗಳೂ ಕಡಿಮೆಯೇನೂ ಇಲ್ಲ ಮತ್ತು ಮಕ್ಕಳಲ್ಲಿ ಕೀಳರಿಮೆ ಬರಬಾರದು ಎಂಬ ಉದ್ದೇಶದಿಂದ ಸರ್ಕಾರ ಸಮವಸ್ತçಗಳು ಶೂ ಸಾಕ್ಸ್ ನೀಡುತ್ತಿದೆ ಎಂದರು
ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಘು, ಸದಸ್ಯರಾದ ಮಧು, ಹನುಮಂತರಾಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ ಪ್ರಸನ್ನಕುಮಾರ, ನಾಗರಾಜು, ಮುಖ್ಯಶಿಕ್ಷಕ ಡಿ ಟಿ ಹನುಮಂತರಾಯ, ಶಾಲಾ ಸಮಿತಿಯ ಪದಾಧಿಕಾರಿಗಳು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು