ಜಮಾ ಆಗಿದೆ.
ಚಿತ್ರದುರ್ಗ : ಸರಕಾರದ ಉಚಿತ ಗ್ಯಾರೆಂಟಿ ಯೋಜನೆಗಳಿಂದ ಅರ್ಹ ಫಲಾನುಭವಿಗಳು ಯಾರು ವಂಚಿರಾಗಬಾರದು ಎಂದು ಫಲಾನುಭವಿಗಳ ಮನೆಬಾಲಿಗೆ ಹೋಗಿ ಗೃಹಲಕ್ಷ್ಮಿ ಭಾಗ್ಯ ಯೋಜನೆಯ 2 ಸಾವಿರ ರೂ ಗಳಿಂದ ವಂಚಿತರಾಗದAತೆ ಅನೇಕ ಬಾರಿ ಸಭೆಗಳನ್ನು ಮಾಡಿ ಗ್ಯಾರೆಂಟಿ ಭಾಗ್ಯಗಳಿಂದ ವಂಚಿತರಾದರೇ ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಕೆ ನೀಡಿದ್ದರೂ ಸಹ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾದ ಸಂಗತಿ ಬಯಲಾಗಿದೆ.
ಹೌದು ಇಂದು ಚಿತ್ರದುರ್ಗ ನಗರದ ಹೊರಯದ ಕಲುಸಿತ ನೀರು ಸೇವಿಸಿ ಮೃತಪಟ್ಟ ಕಾವಾಡಿಗರಹಟ್ಟಿಗೆ ಭೇಟಿ ಪರಿಶೀಲನೆ ಹಾಗೂ ಜನರಿಂದ ಅಹವಾಲು ಸ್ವೀಕರಿಸುವ ವೇಳೆ ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವೆAದು ಮಹಿಳೆಯರು ಬಹಿರಂವಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸಿದರು ಸರ್ಕಾರಿ ಸೌಲಭ್ಯದ ಬಗ್ಗೆ ಮಾತನಾಡಿತ್ತಿದ್ದ ಮುಖ್ಯಮಂತ್ರಿ ನಿಮ್ಮೆಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರ ಹಾಗೂ ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮೆಲ್ಲರಿಗೂ ಬಂದಿರಬೇಕು ಅಲ್ಲವೇ ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು ‘ಇಲ್ಲ ಸ್ವಾಮಿ, ದುಡ್ಡು ಬಂದಿಲ್ಲ, ಬರುತ್ತಿಲ್ಲ’ ಎಂದರು. ರಾಜ್ಯದ 1.26 ಕೋಟಿ ಫಲಾನುಭವಿ ಕುಟುಂಬಗಳ ಪೈಕಿ 1.10 ಕೋಟಿ ಕುಟುಂಬಗಳಿಗೆ ಹಣ ಜಮಾ ಆಗಿದೆ. ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಆಗದ ಪರಿಣಾಮ ಇನ್ನೂ 16 ಲಕ್ಷ ಕುಟುಂಬಕ್ಕೆ ಹಣ ಜಮಾ ಆಗಬೇಕಿದೆ. ಶೀಘ್ರದಲ್ಲಿಯೇ ಎಲ್ಲರಿಗೂ ಹಣ ಬರಲಿದೆ’ ಎಂದು ಮಹಿಳೆಯರಿಗೆ ಭರವಸೆ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದ ಹೆಲಿಪ್ಯಾಡ್ ನಲ್ಲಿ ಗೌರವ ರಕ್ಷೆ ಸ್ವೀಕರಿಸಿ ನಂತರ ಸಾರ್ವಜನಿಕರ ಅಹವಾಲು ಆಲಿಸಿ, ಆದಷ್ಟು ಶೀಘ್ರ ಅವುಗಳನ್ನು ಬಗೆಹರಿಸುವುದಾಗಿ ತಿಳಿಸಿದರು.