ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಳ್ಳಕೆರೆ ಜೈನ್ ಭವನದಲ್ಲಿ ಮಧ್ಯವರ್ಜನ ಶಿಬಿರ
ಚಳ್ಳಕೆರೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ವತಿಯಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಗರದ ಜೈನ್ ಭವನದಲ್ಲಿ ಮಧ್ಯವರ್ಜನ ಶಿಬಿರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀ ನರಸಿಂಹ ಗಿರಿಧಾರಿ ಭಕ್ತರು ವೃಂದ ಇವರಿಂದ ಶಿಬಿರಾರ್ಥಿಗಳು ಜೊತೆಗೂಡಿ ಕೀರ್ತನೆ ಮತ್ತು ಭಜನೆ ಮತ್ತು ಆಧ್ಯಾತ್ಮಿಕ ಕುಣಿತವನ್ನು ಮಾಡಲಾಯಿತು, ಶಿಬಿರಿದ ನಾಲ್ಕನೇ ದಿನವಾದ ಈ ದಿನ ಶಿಬಿರಾರ್ಥಿಗಳು ಅತ್ಯಂತ ಉಲ್ಲಾಸ ಮತ್ತು ಸಂತೋಷದಾಯಕವಾಗಿ ಕೀರ್ತಿನಲ್ಲಿ ಪಾಲ್ಗೊಂಡಿದ್ದರು
ಈ ಸಂದರ್ಭದಲ್ಲಿ ನರಸಿಂಹ ಗಿರಿಧಾರಿ ಭಕ್ತ ವೃಂದದ ಮುಖ್ಯಸ್ಥರಾದ ಶ್ರೀನಿವಾಸಲು, ಮಲ್ಲಿಕಾರ್ಜುನ್, ಶ್ರೀಸಿದ್ದೇಶ್ ಗುರೂಜಿ, ವೆಟರ್ನರಿ ಇನ್ಸ್ಪೆಕ್ಟರ್ ಉಮಾ ಅಶೋಕ, ಪರಿಮಳ, ಭೀಮಕ್ಕಮಲ್ಲಿಕಾರ್ಜುನ, ಲಕ್ಷ್ಮಕ್ಕ, ಯೋಜನೆಯ ಯೋಜನಾಧಿಕಾರಿಗಳಾದ ಶಶಿಕಲಾ, ನೇತಾಜಿ ಪ್ರಸನ್ನ ಕುಮಾರ್, ವಿಮಲಾ, ಭವಾನಿ, ಶಿಬಿರಾಧಿಕಾರಿ ದಿವಾಕರ್, ಪೂಜಾರಿ ಮತ್ತು ಸಹಾಯಕ ರುದ್ರಪ್ಪ…ಇತರರು ಇದ್ದರು.