ಚಳ್ಳಕೆರೆ :
ಚಿತ್ರದುರ್ಗ : ಶಾಸಕ ವಿರೇಂದ್ರ ಪಪ್ಪಿ ಖಾತೆಯಲ್ಲಿದ್ದ 55
ಕೋಟಿ ರೂ. ಜಪ್ತಿ
ಅಕ್ರಮ ಬೆಟ್ಟಿಂಗ್ ಹಾಗೂ ಆನ್ ಲೈನ್ ಗೇಮಿಂಗ್ ಪ್ರಕರಣದಲ್ಲಿ
ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ
ವಿರೇಂದ್ರ ಪಪ್ಪಿ ಮನೆ ಮೇಲೆ ಬುಧವಾರ ಮತ್ತೆ ಇಡಿ ಅಧಿಕಾರಿಗಳು
ದಾಳಿ ಮಾಡಿದ್ದರು.
ಶಾಸಕರಿಗೆ ಸಂಬಂಧಿಸಿದಂತೆ ಆಸ್ತಿಯನ್ನು
ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಸದ್ಯ ವೀರೇಂದ್ರಗೆ ಸೇರಿದ
ಬ್ಯಾಂಕ್ ಅಕೌಂಟ್ಗಳಲ್ಲಿದ್ದ 55 ಕೋಟಿ ರೂಪಾಯಿಯನ್ನು ಜಪ್ತಿ
ಮಾಡಿದ್ದಾರೆ.
ಒಟ್ಟು 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್
ಅಕೌಂಟ್ ಹಾಗೂ 262 ಸ್ಕೂಲ್ ಖಾತೆಗಳಲ್ಲಿದ್ದ ಅಂದಾಜು 55
ಕೋಟಿ ರೂ. ಜಪ್ತಿ ಮಾಡಿದ್ದಲ್ಲದೇ 5 ದುಬಾರಿ ವಾಹನಗಳನ್ನು
ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.

