ನಾಯಕನಹಟ್ಟಿ:: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದಾಧಿಕಾರಿ ಡಾ. ಸಂತೋಷ್ ಹೇಳಿದ್ದಾರೆ.
ಅವರು ಗುರುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ ಚಿತ್ರದುರ್ಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದ್ದಾರೆ. ಕೃತಕವಾಗಿ ತಯಾರಿಸಲು ಸಾಧ್ಯವಾಗದ ರಕ್ತವನ್ನು ಮತ್ತೊಬ್ಬರಿಗೆ ನೀಡಿ ಜೀವ ಉಳಿಸುವಂತಹ ಕೆಲಸ ನಿಜಕ್ಕೂ ಶ್ರೇಷ್ಠ ವಿವಿಧ ಜಿಲ್ಲೆ ಸೇರಿದಂತೆ ರಕ್ತದಾನ ಶಿಬಿರಿಗಳು ಸಾಕಷ್ಟು ನಡೆಯುತ್ತವೆ ಆದರೆ ಪ್ರತಿಯೊಬ್ಬರು ಇಂತಹ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ರಕ್ತದಾನವನ್ನು ಮಾಡಿದರೆ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಇದೆ ವೇಳೆ ವೇಳೆ ಆಪ್ತ ಸಮಾಲೋಚಕರಾದ ಶ್ರೀಮತಿ ಕೆ ಬಿ ಸುಧಾ ಮಾತನಾಡಿ ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ರಕ್ತದಾನ ಶಿಬಿರವನ್ನು ಆಯೋಜಿಸಿರದು ಸಂತಸ ತಂದಿದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿಬಾರಿ ರಕ್ತದಾನ ಶಿಬಿರ ಆಯೋಜಿಸಿದಾಗ ಪಟ್ಟಣದ ಹಸಿರು ಕ್ರಾಂತಿ ಸೇವೆ ಸಂಸ್ಥೆಯವರು ಉತ್ತಮವಾಗಿ ನಮಗೆ ಸಹಕಾರವನ್ನು ನೀಡುತ್ತಾರೆ ಎಂದು ಅವರಿಗೆ ಅಭಿನಂದನೆಯನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರವೇ ಹೋಬಳಿ ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ, ನಗರ ಘಟಕ ಅಧ್ಯಕ್ಷ ಓ. ತಿಪ್ಪೇಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದಾಧಿಕಾರಿ ಡಾ ಸಂತೋಷ್, ಡಾ ಸಣ್ಣೋಬಣ್ಣ, ಆಪ್ತ ಸಮಾಲೋಚಕರಾದ ಕೆ ಬಿ ಶ್ರೀಮತಿ ಸುಧಾ, ಫಾರ್ಮಸಿ ಅಪ್ರೋಜ್, ಆಸ್ಪತ್ರೆಯ ಸಿಬ್ಬಂದಿಗಳಾದ ಸೂರಮ್ಮ, ಮಂಜಣ್ಣ, ಗೌತಮ್, ದೇವರಾಜ್, ರಾಧಮ್ಮ ಸೇರಿದಂತೆ ಮುಂತಾದವರು ಇದ್ದರು

About The Author

Namma Challakere Local News
error: Content is protected !!