ಚಳ್ಳಕೆರೆ : ಪರವಾನಗಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ರಸ್ತೆಗಿಳಿದರೆ ಬೀಳುತ್ತೆ ದಂಡ ವಾಹನ ಸಾವಾರರೆ ಎಚ್ಚರ..! ನಿಮ್ಮ ವಾಹನದ ಮೂಲ ದಾಖಲಾತಿಗಳನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಿ ಒಂದು ವೇಳೆ ಮನೆಯಲ್ಲಿ ಇದೆ, ಕಚೇರಿಯಲ್ಲಿ ಇದೆ ಎಂದು ಸಬೂಬು ಹೇಳಿದರೆ ದಂಡ ಪಿಕ್ಸ್…
ಹೌದು ಚಳ್ಳಕೆರೆ ನಗರದ ಪೊಲೀಸ್ ಇಲಾಖೆ ಅಪಘಾತಗಳ ಪ್ರಕರಣ, ವಾಹನಗಳ ಕಳ್ಳತನ, ನಿಯಮ ಉಲ್ಲಂಘನೆ ಈಗೆ ಪೊಲೀಸ್ ಇಲಾಖೆ ಹಲವು ನಿಯಮಗಳನ್ನು ಉಲ್ಲಂಘಿಸಿದ ವಾಹನಗಳಿಗೆ ರಸ್ತೆಯಲ್ಲಿ ದಂಡ ಹಾಕುವ ಮೂಲಕ ಚಳ್ಳಕೆರೆ ಪೊಲೀಸ್ ಠಾಣೆಯ ಪಿಎಸ್ಐ ಧರೇಪ್ಪಾ ಬಿ.ದೊಡ್ಡಮನಿ ರವರು ಈ ದಂಡದ ಅಸ್ತ್ರದ ಮೊರೆ ಹೊಗಿದ್ದಾರೆ.
ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಚಳ್ಳಕೆರೆ ತಾಲ್ಲೂಕು ಭೂ ವಿಸ್ತೀರ್ಣದಲ್ಲಿ ಕೂಡ ಬಹುಪಾಲು ಹೊಂದಿದೆ.
ಇAತಹ ನಗರ ಪ್ರದೇಶಕ್ಕೆ ಅನ್ಯ ಕೆಲಸ ಕಾರ್ಯಗಳತ್ತ ದಾವಿಸುವ ಸಾರ್ವಜನಿಕರು ನಿಯಮಗಳನ್ನು ಗಾಳಿಗೆ ತೂರಿ ನಗರಕ್ಕೆ ಪ್ರವೇಶ ಮಾಡುತ್ತಾರೆ ಆದರೆ ನಗರದಲ್ಲಿ ಶಿಸ್ತು, ನಿಯಮ ಪಾಲನೆ ಮಾಡಬೇಕಾದ ಪೊಲೀಸ್ ಇಲಾಖೆ ದಂಡದ ಅಸ್ತ್ರದ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಇನ್ನೂ ತಿಂಗಳ ಕೊನೆಯ ವಾರವಾಗಿರುವುದರಿಂದ ಜನದಟ್ಟಣೆ ಇರುವ ನಗರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯ ಮಾಸಚರಣೆ ಕೂಡ ಸವಾರರಿಗೆ ನುಂಗಲಾರದ ತುತ್ತಾಗಿದೆ.
ನಗರಕ್ಕೆ ಆಗಮಿಸುವ ವಾಹನ ಸವಾರರೇ ಎಚ್ಚರದಿಂದ ವಾಹನ ಚಲಾಯಿಸಿ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನಿಮ್ಮ ಬೈಕ್, ಕಾರು ನಿಡುವುದು ಅಪರಾಧ ಯಾವುದೇ ಪರವಾನಿಗೆ ಪಡೆಯದೆ ವಾಹನಗಳನ್ನು ರಸ್ತೆಗೆ ತರುವುದು ನಿಷೇಧ, ಆದ್ದರಿಂದ ಪೊಲೀಸ್ ಇಲಾಖೆಯೊಂದಿಗೆ ಸಹಕಾರಿಸಿ ಇಲ್ಲವಾದರೆ ಬಿಳುತ್ತೆ ದಂಡ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.