ಚಳ್ಳಕೆರೆ : ಬಯಲು ಸೀಮೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಚಳ್ಳಕೆರೆ ಪೊಲೀಸರು ಮರಳು ತುಂಬಿದ ಟ್ರಾಕ್ಟರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದು ವರದಿಯಾಗಿದೆ. ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಗರಣಿಹಳ್ಳದಲ್ಲಿ ಅಕ್ರಮ ಮರಳು ಸಾಗಾಟ ಮಾಡಿತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಕೆ.ಸತೀಶ್ ನಾಯ್ಕ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸರಕಾರಿ ಹಳ್ಳದಲ್ಲಿ ಅಕ್ರಮ ಮರಳು ಸಾಗಾಟ ಮಾಡಿತ್ತಿದ್ದ ಟ್ರಾಕ್ಟರ್ ಚಾಲಕ ಬೋರೇಶ್ ಹಾಗೂ ಟ್ರಾಕ್ಟರ್ ವಶಪಡಿಸಿಕೊಂಡು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡಿದ್ದಾರೆ.
ಅದೇ ರೀತಿ ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದ ಅಜ್ಜಿಕಟ್ಟೆ ಮಾರ್ಗದ ಬೆಳಗರೆ ಅರಣ್ಯ ಇಲಾಖೆಗೆ ಸೇರಿದ ಸರಕಾರಿ ಜಾಗದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮರೆಗೆ ಪಿಎಸ್‌ಐ ಶಿವರಾಜ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮರಳು ಸಾಗಾಡದಲ್ಲಿ ತೊಡಗಿದ್ದ ಬೆಳಗೆರೆ ಗ್ರಾಮದ ಟ್ರಾಕ್ಟರ್ ಡ್ರೈವರ್ ಹಾಗೂ ಟ್ರಾಕ್ಟರ್ ವಶಕ್ಕೆ ಪಡೆದು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.