ಕಾಟಪ್ಪನಹಟ್ಟಿ ಬಂಗೇರ ಕಪ್ಪಲೆ ಬಳಿ ಅನಾಮಧೇಯ ಶವ ಪತ್ತೆ
ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯ ಬಂಗೇರ ಕಪಲೆಯ ಬಾವಿಯಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮದೇಯ ವ್ಯಕ್ತಿಯ ಕೊಳೆತ ಶವಪತ್ತೆ.
ಬಂಗೇರ ಕಪ್ಪಲೆಯ ಬಾವಿ ಬಳಿ ವಾಸನೆ ಬರುತ್ತಿರುವುದರಿಂದ ದಾರಿಹೊಕರಿಂದ ಅನಾಮದೆಯ ಶವ ಪತ್ತೆಯಾಗಿದ್ದು ಸ್ಥಳೀಯರು ಚಳ್ಳಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ವ್ಯಕ್ತಿಯು ನೀರಿನಲ್ಲಿ ಬಿದ್ದು ಸುಮಾರು ಎರಡರಿಂದ ಮೂರು ದಿನ ಆಗಿರುವ ಕಾರಣ ವ್ಯಕ್ತಿಯ ದೇಹ ಸಂಪೂರ್ಣವಾಗಿ ಕೊಳೆತಿದೆ.
ಸ್ಥಳಕ್ಕೆ ಚಳ್ಳಕೆರೆ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ನಿಜಗುಣ, ಚೇತನ್ ಕಾಟ್ಟಪ್ಪನಹಟ್ಟಿ, ಪ್ರಶಾಂತ್, ಗುರು, ಜಯಣ್ಣ ಭೇಟಿ ನೀಡಿ ಮೃತದೇಹವನ್ನು ನೀರಿನಿಂದ ಹೊರ ತೆಗೆದು ಪೊಲೀಸರಿಗೆ ಒಪ್ಪಿಸಿದ್ದಾರೆ
ಮೃತ ದೇಹದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ದೇಸಾಯಿ, ಪಿಎಸ್ಐ ಶಿವರಾಜ್, ಪಿಎಸ್ ಐ.ಕೆ. ಸತೀಶ್ ನಾಯ್ಕ್, ಮಂಜುನಾಥ್ ಮುಡುಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.