ಚಳ್ಳಕೆರೆ : ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ರಾಧಾ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಬೆಳಿ ರಥೋತ್ಸವದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಬೆಂಗಳೂರು ಇಸ್ಕಾನ್ ಮತ್ತು ಚಳ್ಳಕೆರೆ ಶ್ರೀ ಕೃಷ್ಣ ಭಕ್ತ ವೃಂದದ ವತಿಯಿಂದ ನಗರದ ವಾಸವಿ ಮಹಲ್ ನಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಭಿಷೇಕ ಮತ್ತು ಪುಷ್ಪಾರ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಚಳ್ಳಕೆರೆ ಟೌನ್ ವಾಸವಿ ಮಹಲ್ ಗಿರಿಧಾಮ ಭಕ್ತರಿಂದ ಇಸ್ಕಾನ್ ಬೆಂಗಳೂರು ಮತ್ತು ಚಳ್ಳಕೆರೆ ಕೃಷ್ಣ ಭಕ್ತ ವೃಂದ ವತಿಯಿಂದ ನಗರ ಸಂಕೀರ್ತನೆ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಘವೇಂದ್ರ, ಮುಖಂಡರಾದ ನೇತಾಜಿ ಪ್ರಸನ್ನಕುಮಾರ್, ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ವರದರಾಜ ಕೃಷ್ಣ ಪ್ರಭು, ಗುರೂಜಿ ಶ್ರೀನಿವಾಸಲು, ಮಲ್ಲಿಕಾರ್ಜುನ, ಪ್ರಭು, ನಗರಸಭಾ ಸದಸ್ಯ ರಾಘವೇಂದ್ರ, ಶಿವಣ್ಣ, ಅಶೋಕ್, ಬಾನು ಪ್ರ ಕಾಶ್, ಶಿಕ್ಷಕಿ ರೇಣುಕಾ, ಮೋಹಿನಿ, ವೀಣಾ ಅನೇಕ ಭಕ್ತರು ಉಪನ್ಯಾಸಕರಾದ ಸೌಮ್ಯ ಇತರರು ಪಾಲ್ಗೊಂಡಿದ್ದರು.